ಮುಂಬೈ ದಾಳಿಯಲ್ಲಿ ಶಾಮೀಲಾದ ಶಂಕಿತ ಉಗ್ರರನ್ನು ಹಸ್ತಾಂತರಿಸಬೇಕು ಎಂಬ ಭಾರತದ ಬೇಡಿಕೆಗೆ ಪ್ರತಿಯಾಗಿ, ಸಂಜೋತ್ ಎಕ್ಸ್‌ಪ್ರೆಸ್ ಘಟನೆ ಭಾಗಿಯಾಗಿರಬಹುದೆಂದು ಶಂಕಿಸಲಾಗಿರುವ ಕರ್ನಲ್ ಪುರೋಹಿತ್‌ನನ್ನು ನಮಗೆ ಹಸ್ತಾಂತರಿಸಿ ಎಂದು ಬೇಡಿಕೆ ಇಟ್ಟಿಲ್ಲ ಎಂದು ಪಾಕ್ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಸ್ಪಷ್ಟಪಡಿಸಿದ್ದಾರೆ.
ಕರ್ನಲ್ ಪುರೋಹಿತ್ ಅವರನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸುವ ಬಗ್ಗೆ ಎರಡು ದೇಶಗಳ ನಡುವೆ ಯಾವುದೇ ಒಪ್ಪಂದ ಆಗಿಲ್ಲ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಯಾವುದೇ ಆರೋಪಿಗಳನ್ನು ಭಾರತ ನಮಗೆ ಹಸ್ತಾಂತರಿಸಲಿ ಎಂದು ಬೇಡಿಕೆ ಸಲ್ಲಿಸಿಲ್ಲ ಎಂದು ಗಿಲಾನಿ ಹೇಳಿದರು. ಅವರು ಲಾಹೋರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು. ಅಲ್ಲದೇ ಮುಂಬೈ ದಾಳಿಯಲ್ಲಿ ಶಾಮೀಲಾದ ಉಗ್ರರನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಶ್ನೆಯೇ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. |