ಅಫ್ಘಾನಿಸ್ತಾನ ಗಡಿಭಾಗದ ಬುಡಕಟ್ಟು ಪ್ರದೇಶಗಳಲ್ಲಿ ಅಮೆರಿಕ ನಡೆಸುತ್ತಿರುವ ವೈಮಾನಿಕ ದಾಳಿಯನ್ನು ಕೂಡಲೇ ನಿಲ್ಲಿಸಬೇಕು ಎಂದು ಪಾಕಿಸ್ತಾನ ಅಮೆರಿಕಕ್ಕೆ ಆಗ್ರಹಿಸಿದೆ.
ಬುಡಕಟ್ಟು ಪ್ರದೇಶದಲ್ಲಿ ಉಗ್ರ ನಿಗ್ರಹ ಹೆಸರಲ್ಲಿ ಅಮೆರಿಕ ಮಿಸೈಲ್ ದಾಳಿ ನಡೆಸುತ್ತಿರುವ ಮೂಲಕ ನಾಗರಿಕರು ಸಾವನ್ನಪ್ಪುತ್ತಿರುವುದಾಗಿ ಪಾಕ್ ಆರೋಪಿಸಿದೆ.
ಆ ನಿಟ್ಟಿನಲ್ಲಿ ನೂತನವಾಗಿ ಅಧ್ಯಕ್ಷಗಾದಿ ಏರಿರುವ ಬರಾಕ್ ಹುಸೇನ್ ಒಬಾಮ ಅವರ ಆಡಳಿತ ಭಯೋತ್ಪಾದನೆ ನಿಗ್ರಹ ಕುರಿತ ನೀತಿಯನ್ನು ಪುನರ್ ಪರಿಶೀಲನೆಗೆ ಒಳಪಡಿಸಬೇಕು ಎಂದು ಪಾಕ್ ಸರ್ಕಾರ ಅಮೆರಿಕಕ್ಕೆ ಮನವಿ ಮಾಡಿಕೊಂಡಿದೆ.
ಉತ್ತರ ಮತ್ತು ದಕ್ಷಿಣ ವಜಿರಿಸ್ತಾನದ ಬುಡಕಟ್ಟು ಪ್ರದೇಶದಲ್ಲಿ ಶನಿವಾರ ಅಮೆರಿಕದ ಮಿಸೈಲ್ ದಾಳಿಗೆ ಮಕ್ಕಳು ಸೇರಿದಂತೆ 22ಮಂದಿ ಬಲಿಯಾಗಿದ್ದು, ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪಾಕ್, ಅಮೆರಿಕ ಕೂಡಲೇ ಮಿಸೈಲ್ ದಾಳಿ ನಿಲ್ಲಿಸಬೇಕೆಂದು ಒತ್ತಾಯಿಸಿದೆ. |