ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದಿರುವ ಪಾಕ್, ಪಂಜಾಬ್ ಪ್ರಾಂತ್ಯದ ಮುರ್ಡಿಕೆಯಲ್ಲಿನ ಜಮಾತ್ ಉದ್ ದವಾದ(ಜೆಯುಡಿ) ಕೇಂದ್ರ ಕಚೇರಿಗೆ ಪೊಲೀಸರು ಬೀಗ ಜಡಿದಿರುವುದಾಗಿ ಪಾಕಿಸ್ತಾನದ ಮಾಧ್ಯಮಗಳ ವರದಿ ತಿಳಿಸಿದೆ.
ಪಂಜಾಬ್ ಪ್ರಾಂತ್ಯದ ಮುರ್ಡಿಕೆಯಲ್ಲಿರುವ ಜಮಾದ್ ಉದ್ ದವಾದ ಕೇಂದ್ರ ಕಚೇರಿಗೆ ಬೀಗ ಹಾಕುವ ಮೂಲಕ ಜೆಯುಡಿಗೆ ಮೂಗುದಾರ ಹಾಕಿರುವುದಾಗಿ ಮಾಧ್ಯಮಗಳ ವರದಿ ವಿವರಿಸಿದೆ.
ಲಾಹೋರ್ ಕಮೀಷನರ್ ಖುಸ್ರೋ ಪರ್ವೆಜ್ ಅವರು ಮುರ್ಡಿಕ್‌ನಲ್ಲಿ ಮೊಕ್ಕಾಂ ಹೂಡಿದ್ದು, ಇಡೀ ಪ್ರದೇಶಾದ್ಯಂತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಏತನ್ಮಧ್ಯೆ ಜೆಯುಡಿಯ ಸಮಾಜಕಲ್ಯಾಣ ಅಸೋಸಿಯೇಶನ್ ತನ್ನ ಕಾರ್ಯಚಟುವಟಿಕೆಯನ್ನು ಮುಂದುವರಿಸಿದೆ. ಆದರೆ ಆ ಬಗ್ಗೆ ಪಂಜಾಬ್ ಸರ್ಕಾರ ಹದ್ದಿನಗಣ್ಣು ಇಟ್ಟಿರುವುದಾಗಿ ಹೇಳಿದೆ.
ಜೆಯುಡಿಯ ಕಾರ್ಯಚಟುವಟಿಕೆಗಳ ಮೇಲೆ ನಿರ್ಬಂಧ ಹೇರುವಂತೆ ಪಾಕಿಸ್ತಾನದ ಮೇಲೆ ಅಂತಾರಾಷ್ಟ್ರೀಯ ಒತ್ತಡ ಹೆಚ್ಚತೊಡಗಿತ್ತು. ಅಲ್ಲದೇ ಕಳೆದ ಡಿಸೆಂಬರ್‌ನಲ್ಲಿ ಜೆಯುಡಿ ಮೇಲೆ ವಿಶ್ವಸಂಸ್ಥೆ ನಿಷೇಧ ಹೇರಿತ್ತು. ಜೆಯುಡಿಯ ಎಲ್ಲಾ ಸಂಸ್ಥೆಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವುದಾಗಿ ವರದಿ ತಿಳಿಸಿದೆ. |