ಭಾರತದ ಜನತೆಗೆ ಅಮೆರಿಕದವರಿಗಿಂತ ಒಳ್ಳೆ ಸ್ನೇಹಿತರು ಮತ್ತು ಪಾಲುಗಾರರು ಇನ್ನೊಬ್ಬರಿರಲಾರರು ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ಸೋಮವಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಭಾರತದ 60ಗಣರಾಜ್ಯೋತ್ಸವದ ಸಂದರ್ಭದಲ್ಲಿ ಭಾರತೀಯರಿಗೆ ಶುಭ ಕೋರಿರುವ ಅವರು, ಈ ಎರಡೂ ದೇಶಗಳ ಮೌಲಿಕ ಪಾಲುದಾರಿಕೆಯಿಂದ ನಮ್ಮ ಸ್ವಾತಂತ್ರ್ಯ ಮತ್ತು ಮುಕ್ತ ಸಮಾಜಕ್ಕೆ ಕಂಟಕವಾಗಿರುವ ಭಯೋತ್ಪಾದನೆ ಸೇರಿದಂತೆ ಯಾವುದೇ ಸಮಸ್ಯೆಯನ್ನು ಧೈರ್ಯವಾಗಿ ಎದುರಿಸಬಹುದು ಎಂದಿದ್ದಾರೆ.ಪ್ರಜಾಪ್ರಭುತ್ವ, ಸ್ವಾತಂತ್ರ್ಯ, ಧಾರ್ಮಿಕ ನಿರಪೇಕ್ಷತೆ ಮತ್ತು ವಿವಿಧತೆಯಲ್ಲಿ ಏಕತೆಯಲ್ಲಿ ವಿಶ್ವಾಸ ಹೊಂದಿರುವ ಎರಡೂ ರಾಷ್ಟ್ರಗಳ ಜನತೆ ಜೊತೆಯಾಗಿ ಸಂಭ್ರಮಿಸೋಣ ಎಂದು ಹೇಳಿದ್ದಾರೆ. |