ಎಲ್‌ಟಿಟಿಇ ಪ್ರಾಬಲ್ಯದ ಕೊನೆಯ ತಾಣವಾದ ಮಲ್ಲೈತೀವು ಪಟ್ಟಣವನ್ನು ಶ್ರೀಲಂಕಾ ಸೇನೆ ವಶಪಡಿಸಿಕೊಳ್ಳುವ ಮೂಲಕ, ತಮಿಳು ಟೈಗರ್ ಮುಖ್ಯಸ್ಥ ಪ್ರಭಾಕರನ್ ಬಂಧನಕ್ಕೆ ಸಜ್ಜಾಗಿರುವುದಾಗಿ ಸೇನೆ ತಿಳಿಸಿದೆ.
1983ರಿಂದ ಪ್ರತ್ಯೇಕವಾದದ ಮೂಲಕ ಹೋರಾಟ ನಡೆಸುತ್ತಾ ಬಂದಿದ್ದ ತಮಿಳು ಹುಲಿಗಳ ಅಟ್ಟಹಾಸವನ್ನು ಮೆಟ್ಟಿ ಮುರಿದಿರುವುದಾಗಿ ತಿಳಿಸಿರುವ ಆರ್ಮಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಸಾರತ್ ಫೋನೆಸೆಕಾ ವಿವರಿಸಿದ್ದಾರೆ.
ಭಾನುವಾರ ಶ್ರೀಲಂಕಾದ ಕೊನೆಯ ಪ್ರಾಬಲ್ಯದ ತಾಣವಾಗಿರುವ ಮಲ್ಲೈತೀವುವನ್ನು ಸೇನೆ ತನ್ನ ವಶಕ್ಕೆ ತೆಗೆದುಕೊಂಡಿರುವುದಾಗಿ ಹೇಳಿದೆ. ಎಲ್‌ಟಿಟಿಇ ಪ್ರಾಬಲ್ಯಗದ ಬಹುತೇಕ ಪ್ರದೇಶಗಳನ್ನು ಸೇನೆ ವಶಪಡಿಸಿಕೊಂಡಿರುವುದರಿಂದ ಪ್ರಭಾಕರನ್‌ಗೆ ಸಿಮೀತ ಅವಕಾಶಗಳಿವೆ ಎಂದು ರಕ್ಷಣಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಗೆರಿಲ್ಲಾ ನಾಯಕರು ವಾನ್ನಿ ಪ್ರದೇಶ, ಕಿಲಿನೋಚ್ಚಿ ಮತ್ತು ಮಲ್ಲೈತೀವು ಪಟ್ಟಣಗಳ ಆಸುಪಾಸಿನಲ್ಲೇ ಇರಬಹುದೆಂದು ಶಂಕಿಸಲಾಗಿದೆ ಎಂದು ಹೇಳಿದ್ದಾರೆ. |