ಪಾಕಿಸ್ತಾನದ ಗಡಿಭಾಗದೊಳಗೆ ಅಮೆರಿಕ ನಡೆಸುತ್ತಿರುವ ದಾಳಿಯ ನೀತಿ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಬೇಕು ಎಂದು ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಮತ್ತೊಮ್ಮೆ ಅಮೆರಿಕವನ್ನು ಒತ್ತಾಯಿಸಿದ್ದು, ಈ ಗಂಭೀರ ವಿಷಯವನ್ನು ವಿಶ್ವ ಸಮುದಾಯದ ಎದುರು ಮಂಡಿಸುವುದಾಗಿಯೂ ಹೇಳಿದ್ದಾರೆ.
ಸ್ವಿಟ್ಜರ್ಲಾಂಡಿನಲ್ಲಿ ಮುಂದಿನ ತಿಂಗಳು ನಡೆಯಲಿರುವ ಆರ್ಥಿಕ ಶೃಂಗಸಭೆಯಲ್ಲಿ ಅಮೆರಿಕದ ನೀತಿ ಬಗ್ಗೆ ಧ್ವನಿ ಎತ್ತುವುದಾಗಿ ಗಿಲಾನಿ ತಿಳಿಸಿದ್ದಾರೆ.
ಅಮೆರಿಕದ ಜನತೆ ಬದಲಾವಣೆ ಶಕೆಗಾಗಿ ಕಾದಿದ್ದಾರೆ ಎಂದಿರುವ ಗಿಲಾನಿ, ಆ ನಿಟ್ಟಿನಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ತಮ್ಮ ನೀತಿಯನ್ನು ಬದಲಾಯಿಸಲಿದ್ದಾರೆ ಎಂಬ ವಿಶ್ವಾಸ ಹೊಂದಿರುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಮಂಗಳವಾರದಿಂದ ಆರಂಭವಾಗಲಿರುವ ವಿಶ್ವ ಆರ್ಥಿಕ ಶೃಂಗ ಸಮ್ಮೇಳನದ ಮುಂದೆ ಇಡುವುದಾಗಿ ಗಿಲಾನಿ ವಿವರಿಸಿದ್ದಾರೆ. ಅವರು ಇಂದು ಸ್ವಿಟ್ಜರ್ಲ್ಯಾಂಡಿಗೆ ತೆರಳಿದ್ದಾರೆ. |