ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಮಹಿಳೆಯೊಬ್ಬರು 'ಎಂಟು ಮಕ್ಕಳಿಗೆ' ಜನ್ಮ ನೀಡುವ ಮೂಲಕ ಮೂಗಿನ ಮೇಲೆ ಬೆರಳುಡುವ ಹಾಗೆ ಅಚ್ಚರಿ ಹುಟ್ಟಿಸಿದ್ದಾರೆ. ಅಲ್ಲದೇ 1998ರಲ್ಲಿ ಹೂಸ್ಟನ್‌ಲ್ಲಿ ಮಹಾತಾಯಿಯೊಬ್ಬರು 8ಮಕ್ಕಳಿಗೆ ಜನ್ಮ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಆದರೆ ಎಂಟು ಮಕ್ಕಳಿಗೆ ಸೋಮವಾರ ಜನ್ಮ ನೀಡಿದ ಮಹಾತಾಯಿ ಯಾರೆಂದು ನಿಖರವಾಗಿ ತಿಳಿದು ಬಂದಿಲ್ಲ ಎಂದು ತಿಳಿಸಿರುವ ವರದಿ, ಜನ್ಮವೆತ್ತಿರುವ ಮಕ್ಕಳಲ್ಲಿ ಆರು ಹೆಣ್ಣು, ಎರಡು ಗಂಡು ಮಗು, ಅವೆಲ್ಲವೂ 820ಗ್ರಾಂ ಹಾಗೂ 1.5ಕಿ.ಲೋ ಗ್ರಾಂ ತೂಕ ಹೊಂದಿರುವುದಾಗಿ ಆಸ್ಪತ್ರೆಯ ವೈದ್ಯರಾದ ಕೈಸೆರ್ ಪೆರ್‌ಮಾನ್ಟೆ ವಿವರಿಸಿದ್ದಾರೆ.
ಇದು ನಿಜಕ್ಕೂ ಅಚ್ಚರಿ ಎಂದು ವೈದ್ಯ ಕಾರೆನ್ ಮಾಪ್ಲ್ಸ್ ಅಭಿಪ್ರಾಯ ವ್ಯಕ್ತಪಡಿಸಿದ್ದು, ಜನ್ಮವೆತ್ತ ಎಂಟು ಮಕ್ಕಳ ಆರೋಗ್ಯ ಉತ್ತಮವಾಗಿದ್ದು,ತಾಯಿಯ ಆರೋಗ್ಯವು ಸುಸ್ಥಿತಿಯಲ್ಲಿದೆ ಎಂದು ಹೇಳಿದ್ದಾರೆ.
ಕೇವಲ 5ನಿಮಿಷಗಳಲ್ಲಿಯೇ ಎಂಟು ಮಕ್ಕಳಿಗೆ ಜನ್ಮ ನೀಡಿರುವ ಆ ಮಹಾತಾಯಿಯ ಎಲ್ಲಾ ಮಕ್ಕಳು ಚೀರಾಟದೊಂದಿಗೆ ಉಲ್ಲಾಸದಿಂದ ಇರುವುದಾಗಿ ಹೆರಾಲ್ಡ್ ಹೆನ್ರಿ ಟಿವಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
1998ರಲ್ಲಿ ಹೂಸ್ಟನ್‌ನಲ್ಲಿ ಪ್ರಥಮ ಬಾರಿಗೆ ಎಂಟು ಮಕ್ಕಳಿಗೆ ಮಹಿಳೆಯೊಬ್ಬರು ಎಂಟು ಮಕ್ಕಳಿಗೆ ಜನ್ಮ ನೀಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ ಒಂದು ವಾರದ ನಂತರ ಒಂದು ಮಗು ಸಾವನ್ನಪ್ಪಿತ್ತು. ಬದುಕುಳಿದಿರುವ ಮಕ್ಕಳಾದ ಎಬುಕಾ, ಗೊರೂಮ್, ಚಿಡಿ, ಚಿಮಾ, ಎಚೆರೆಮ್ ಹಾಗೂ ಗಂಡು ಮಕ್ಕಳಾದ ಲಾಕೆಮ್ ಮತ್ತು ಜಿಯೊಕೆ ಕಳೆದ ಡಿಸೆಂಬರ್‌ನಲ್ಲಿ 10ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದರು.
ಮಕ್ಕಳ ಪೋಷಕರಾದ ನಕೆಮ್ ಚುಕುವೂ ಮತ್ತು ಲೆಕೆ ಲೂಯಿಸ್ ಉಡೋಬಿ, ತಮ್ಮ ಮಕ್ಕಳ 10ನೇ ಹುಟ್ಟು ಹಬ್ಬ ಆಚರಿಸಿದ ಬಗ್ಗೆ ಸಂತಸ ವ್ಯಕ್ತಪಡಿಸಿ, ಮಕ್ಕಳೆಲ್ಲರೂ ಆರೋಗ್ಯವಂತರಾಗಿದ್ದು, ಅವರೊಂದಿಗೆ ಕಾಲ ಕಳೆಯುವುದೇ ತುಂಬಾ ಸಂತಸದ ವಿಷಯವಾಗಿದೆ ಎಂದಿದ್ದಾರೆ. |