ಪಾಕಿಸ್ತಾನ ಗಡಿಭಾಗವಾದ ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿ ತುಂಬಾ ಅಪಾಯಕಾರಿಯಾದದ್ದು ಎಂದು ಶ್ವೇತಭವನದ ಮೂಲಗಳು ತಿಳಿಸಿದ್ದು, ಆ ನಿಟ್ಟಿನಲ್ಲಿ ಒಬಾಮ ನೇತೃತ್ವದ ಆಡಳಿತ ಅಫ್ಘಾನ್‌ನಲ್ಲಿನ ಪರಿಸ್ಥಿತಿ ಸುಧಾರಣೆಗಾಗಿ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದೆ.
ಅಧ್ಯಕ್ಷ ಪದವಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಒಬಾಮ ಅವರು, ಪ್ರಸಕ್ತವಾಗಿ ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿ ತುಂಬಾ ಅಪಾಯಕಾರಿಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಸೇನೆಯನ್ನು ನಿಯೋಜಿಸಲಾಗುವುದು ಎಂದು ಭರವಸೆ ನೀಡಿದ್ದರು. ಹಾಗಾಗಿ ಭಯೋತ್ಪಾದಕರ ನಿಗ್ರಹ ಅತ್ಯಗತ್ಯ ಎಂದು ಶ್ವೇತಭವನದ ವಕ್ತಾರ ರೋಬರ್ಟ್ ಗಿಬ್ಸ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೆರಿಕ ಜನರ ರಕ್ಷಣೆ ಅಗತ್ಯವಾಗಿದೆ ಮತ್ತು ಅಫ್ಘಾನಿಸ್ತಾನ ಉಗ್ರಹ ನಿಗ್ರಹಕ್ಕೆ ಮುಂದಾಗಬೇಕು ಎಂದು ಹೇಳಿದ್ದಾರೆ.
ಅಫ್ಘಾನಿಸ್ತಾನ ಮತ್ತು ಇರಾಕ್‌ನಲ್ಲಿನ ಪರಿಸ್ಥಿತಿ ಕುರಿತು ಬರಾಕ್ ಅವರ ನೂತನ ಆಡಳಿತ ಪ್ರಕ್ರಿಯೆ ಪುನರ್‌ಪರಿಶೀಲನೆ ನಡೆಸುತ್ತಿದೆ. ಅದಕ್ಕಾಗಿ ಅಧ್ಯಕ್ಷ ಬರಾಕ್ ಅವರು ಕಾರ್ಯದರ್ಶಿ ಗೇಟ್ಸ್, ಮಿಲಿಟರಿಯ ಸಹಾಯಕ ವರಿಷ್ಠ ಅವರೊಂದಿಗೆ ಸಮಾಲೋಚನೆ ನಡೆಸುತ್ತಿರುವುದಾಗಿ ಗಿಬ್ಸ್ ತಿಳಿಸಿದ್ದಾರೆ. |