ಆರ್ಥಿಕ ಹೊಡೆತದಿಂದ ಬಹುತೇಕ ಐಟಿ-ಬಿಟಿ ಕಂಪೆನಿಗಳಲ್ಲಿ ಕೆಲಸದಿಂದ ನೌಕರರನ್ನು ವಜಾಗೊಳಿಸಿದ್ದ ಸುದ್ದಿ ಕೇಳಿದ್ದೀರಿ... ಆದರೆ ಇದು ಉಲ್ಟಾ ವಿಚಾರ. ಆಸ್ಟ್ರೇಲಿಯಾ ಮೂಲದ ಎಂಜಿನಿಯರೊಬ್ಬ ವಾಶ್ ರೂಂನಲ್ಲಿ ಟಾಯ್ಲೆಟ್ ಪೇಪರ್ ಉಪಯೋಗಿಸದೆ, ನೀರನ್ನು ಬಳಸಿದ್ದಕ್ಕೆ ಕೆಲದಿಂದಲೇ ವಜಾ ಮಾಡಲಾಗಿದೆ !
ನೀರು ಬಳಸಿದ್ದಕ್ಕೆ ನೌಕರರನ್ನು ಕೆಲದಿಂದ ವಜಾ ಮಾಡಿದ್ದನ್ನು ಕಂಪೆನಿ ನಿರಾಕರಿಸಿದೆ. ಆದರೆ ಮ್ಯಾನೇಜರ್ ಬೈರೂನ್ ಕಾರ್ಟರ್, ಫಿಲಿಪಿನೋ ನೌಕರರು, ಅಮ್ಡೋರ್ ಬೆರ್ನಾಬೆಸ್ ಟಾಯ್ಲೆಟ್ ಅನ್ನು ಉಪಯೋಗಿಸುತ್ತಾರೆ. ಗಂಭೀರ ಆರೋಗ್ಯ ಸಮಸ್ಯೆಗಳಿದ್ದಾಗ ಆ ರೀತಿ ಮಾಡುವುದರಿಂದ ಇತರ ನೌಕರರಿಗೂ ತೊಂದರೆ ಉಂಟಾಗುವ ಸಾಧ್ಯತೆ ಇರುವುದಾಗಿ ಸಾಕಷ್ಟು ಬಾರಿ ಎಚ್ಚರಿಕೆ ನೀಡಲಾಗಿತ್ತು ಎಂದಿದ್ದಾರೆ.
43ರ ಹರೆಯದ ಟೌನ್‌ಸ್ವಿಲ್ಲೆ ಎಂಜಿನಿಯರಿಂಗ್ ಇಂಡಸ್ಟ್ರೀಸ್ (ಟಿಇಐ)ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೆಷಿನ್ ಆಪರೇಟರ್, ವರ್ಕಿಂಗ್ ವೀಸಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಆತ ಟಾಯ್ಲೆಟ್‌ನಲ್ಲಿ ಪೇಪರ್ ಉಪಯೋಗಿಸುವುದನ್ನು ಬಿಟ್ಟು, ನೀರು ಬಳಸಿದ್ದಕ್ಕೆ ಕೆಲಸದಿಂದಲೇ ತೆಗೆದು ಹಾಕಿರುವುದಾಗಿ ಸ್ಥಳೀಯ ಮಾಧ್ಯಮವೊಂದರ ವರದಿ ಬಹಿರಂಗಗೊಳಿಸಿದೆ.
|