ಭಯೋತ್ಪಾದಕರ ನಿಗ್ರಹದಲ್ಲಿ ಪಾಕಿಸ್ತಾನ ಕಠಿಣ ನಿಲುವು ತಾಳಬೇಕು ಎಂದು ಆಗ್ರಹಿಸಿರುವ ಅಮೆರಿಕ, ಇದೀಗ ಉಗ್ರಹ ನಿಗ್ರಹಕ್ಕಾಗಿ ಕೊಡ ಮಾಡಿದ ಸುಮಾರು 55 ಮಿಲಿಯನ್ ಡಾಲರ್ ಹಣವನ್ನು ಅಮೆರಿಕ ಹಿಂದಕ್ಕೆ ಪಡೆದಿರುವುದಾಗಿ ಪಾಕ್ ಅಸಮಾಧಾನ ವ್ಯಕ್ತಪಡಿಸಿದೆ.
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ಗಡಿಭಾಗದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆ ನಿಗ್ರಹಕ್ಕೆ ಅಮೆರಿಕ ಆರ್ಥಿಕ ನೆರವು ನೀಡುತ್ತಿದ್ದು, ಈ ಬಾರಿ ಆಡಿಟರ್ ಅವರು ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ 55ಮಿ.ಡಾಲರ್ ಹಣವನ್ನು ವಾಪಸು ಪಡೆದಿದೆ.
ಅಮೆರಿಕ ತಡೆ ಹಿಡಿದಿರುವ ಈ ಬೆಳವಣಿಗೆಯ ಕುರಿತು ಪಾಕಿಸ್ತಾನ ಪ್ರಧಾನಮಂತ್ರಿ ಕಚೇರಿಯ ಆರ್ಥಿಕ ಸಲಹೆಗಾರ ಶೌಕತ್ ತಾರಿನ್ ಖಚಿತಪಡಿಸಿದ್ದು, ಅಮೆರಿಕ ತನ್ನ ನಿರ್ಧಾರವನ್ನು ಬದಲಾಯಿಸಬೇಕೆಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದ್ದು, ತಡೆ ಹಿಡಿದಿರುವ ಹಣವನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.
ಪಾಕಿಸ್ತಾನ ಮೊದಲು ಭಯೋತ್ಪಾದನೆಯನ್ನು ನಿಗ್ರಹಸಲಿ, ಬಳಿಕ ದೇಶದ ಮಿಲಿಟರಿಯೇತರ ಅಭಿವೃದ್ದಿಗಾಗಿ ಷರತ್ತು ಬದ್ದ ಆರ್ಥಿಕ ನೆರವು ನೀಡಲು ಅಮೆರಿಕ ಸಿದ್ದ ಎಂದು ಬರಾಕ್ ಒಬಾಮ ಇತ್ತೀಚೆಗಷ್ಟೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. |