ವಾಷಿಂಗ್ಟನ್: ಯುದ್ಧಪೀಡಿತ ಅಫ್ಘಾನಿಸ್ತಾನದ ಪುನರ್ ನಿರ್ಮಾಣದಲ್ಲಿ ಭಾರತದ ಪಾತ್ರವನ್ನು ಅಮೆರಿಕದ ಸೇನಾ ಮುಖ್ಯಸ್ಥರು ಶ್ಲಾಘಿಸಿದ್ದಾರೆ.
ಈ ಸಂಬಂಧ ನವದೆಹಲಿ ಅತ್ಯುತ್ತಮ ಹೆಜ್ಜೆ ಇಟ್ಟಿದೆ ಎಂದು ಅಮೆರಿಕ ಸೇನಾಪಡೆಗಳ ಮುಖ್ಯಸ್ಥ ಅಡ್ಮಿರಲ್ ಮೈಕ್ ಮುಲ್ಲೆನ್ ತಿಳಿಸಿದ್ದಾರೆ.
ಅಫ್ಘಾನ್ ಸಮಸ್ಯೆ ನಿವಾರಣೆಯನ್ನು ಪ್ರಾದೇಶಿಕ ಮಟ್ಟದಲ್ಲಿ ನೋಡಬೇಕು ಎಂದು ಅಧ್ಯಕ್ಷ ಬರಾಕ್ ಒಬಾಮ ಅವರು ಇತ್ತೀಚೆಗೆ ಹೇಳಿರುವುದನ್ನು ಸಮರ್ಥಿಸಿರುವ ಮೈಕ್ ಮುಲ್ಲೆನ್ ಆ ಹಿನ್ನೆಲೆಯಲ್ಲಿಯೂ ಅಫ್ಘಾನ್ ಪುನರ್ ನಿರ್ಮಾಣದಲ್ಲಿ ಭಾರತ ತೊಡಗಿರುವುದು ಗಮನಾರ್ಹ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ. |