ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿರುವ ಆರೋಪದ ಮೇಲೆ 81 ಟಿಬೆಟಿಯನ್‌ರನ್ನು ಚೀನಾ ಪೊಲೀಸರು ಬಂಧಿಸಿರುವುದಾಗಿ ಮಾಧ್ಯಮ ವರದಿಯೊಂದು ತಿಳಿಸಿದೆ.
ಚೀನಾ ಟಿಬೆಟ್ ಮೇಲೆ ಅತಿಕ್ರಮಣ ನಡೆಸುತ್ತಿದೆ ಎಂದು ಚೀನಾ ನೀತಿಯನ್ನು ವಿರೋಧಿಸಿ ಕಳೆದ ವರ್ಷ ಮಾರ್ಚ್‌ನಲ್ಲಿ ಲಾಸಾದಲ್ಲಿ ಭಾರೀ ಪ್ರತಿಭಟನೆ ನಡೆದಿದ್ದು, ಹಲವಾರು ಮಂದಿಯನ್ನು ಕ್ರಿಮಿನಲ್ ಆರೋಪದ ಮೇಲೆ ಬಂಧಿಸಲಾಗಿತ್ತು. ಇದೀಗ ಮುನ್ನೆಚ್ಚರಿಕೆಯ ಅಂಗವಾಗಿ ಚೀನಾ ಶಂಕಿತರನ್ನು ವಶಕ್ಕೆ ತೆಗೆದುಕೊಳ್ಳುವ ಕಾರ್ಯವನ್ನು ಮತ್ತೆ ಮುಂದುವರಿಸಿದೆ ಎಂದು ಟಿಬೆಟ್ ಆರೋಪಿಸಿದೆ.
ಇದೀಗ ಜನವರಿ 18ರಂದು ಲಾಸಾದಲ್ಲಿ ಮತ್ತೆ ಸಾರ್ವಜನಿಕ ರಕ್ಷಣಾ ಬ್ಯೂರೋ ವಸತಿ ಪ್ರದೇಶ, ಹೋಟೆಲ್, ಗೆಸ್ಟ್ ಹೌಸ್, ಇಂಟರ್ನೆಟ್ ಕೆಫೆ, ಬಾರ್‌ಗಳಲ್ಲಿ ತೀವ್ರ ಶೋಧ ನಡೆಸುತ್ತಿರುವುದಾಗಿ ಟಿಬೆಟಿಯನ್ ಡೈಲಿ ವರದಿ ಹೇಳಿದೆ.
ಶನಿವಾರದಂದು ಶಂಕಿತ ಆರೋಪಗಳಲ್ಲಿ ತೊಡಗಿದ್ದಾರೆಂಬ ಹಿನ್ನೆಲೆಯಲ್ಲಿ 51ಮಂದಿಯನ್ನು ಹಾಗೂ ದರೋಡೆ, ವೇಶ್ಯಾವಾಟಿಕೆ, ಕಳ್ಳತನ ಆರೋಪದಲ್ಲಿ 30ಜನರನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿಸಿದೆ. |