ಎಲ್‌ಟಿಟಿಇ ತಮ್ಮ ಪ್ರಾಬಲ್ಯ ಹೊಂದಿರುವ ಪ್ರದೇಶದಲ್ಲಿರುವ ಸುಮಾರು 300ಮಂದಿ ರೋಗಿಗಳನ್ನು ತಮ್ಮ ವಶದಲ್ಲಿಟ್ಟುಕೊಂಡಿರುವುದಾಗಿ ವರದಿಯೊಂದು ತಿಳಿಸಿದೆ.
ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿ ಮತ್ತು ವಿಶ್ವಸಂಸ್ಥೆ ವ್ಯವಸ್ಥೆ ಮಾಡಿದ 24 ವಾಹನಗಳ ಬೆಂಗಾವಲು ಪಡೆಯನ್ನು ಸಮರ ಪ್ರದೇಶಕ್ಕೆ ಕಾಲಿಡದಂತೆ ಎಲ್‌ಟಿಟಿಇ ಪ್ರತಿರೋಧ ಒಡ್ಡುತ್ತಿರುವುದಾಗಿ ವರದಿ ವಿವರಿಸಿದೆ.
ಉಗ್ರಗಾಮಿಗಳು ಎಲ್ಲಾ ರೋಗಿಗಳನ್ನು ಗುರಾಣಿಯಂತೆ ಬಳಸುತ್ತಿದ್ದಾರೆ. ವಾಹನಗಳನ್ನು ಬಂದೂಕುಧಾರಿ ತಮಿಳು ಹುಲಿಗಳು ಅಡ್ಡಗಟ್ಟಿ ರೆಡ್ ಕ್ರಾಸ್ ಮತ್ತು ವಿಶ್ವಸಂಸ್ಥೆ ಅಧಿಕಾರಿಗಳ ಜತೆ ಕಾದಾಟ ನಡೆಸುತ್ತಿರುವುದಾಗಿ ಹೇಳಿದೆ.ಬಂಡುಕೋರರು ಹಿಡಿತದಲ್ಲಿರುವ ವಾನ್ನಿ ಪ್ರದೇಶದಿಂದ ಹೊರಹೋಗದಂತೆ ಶ್ರೀಲಂಕಾ ಪಡೆ ಎಲ್ಲೆಡೆ ಕಟ್ಟೆಚ್ಚರ ವಹಿಸಿದೆ. |