ಬರಾಕ್ ಒಮಾಮ ಅವರಿಗೆ ಅಮೆರಿಕದಲ್ಲಿನ ವರ್ಗಸಂಘರ್ಷದ ವಿರುದ್ಧ ಹೋರಾಡಿದ ಮಾರ್ಟಿನ್ ಲೂಥರ್ ಕಿಂಗ್ ಹಾಗೂ ಭಾರತದ ಮಹಾತ್ಮಗಾಂಧಿಯ ಅವರ ಆದರ್ಶವೇ ನನಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ ಅಮೆರಿಕದ ಇಬ್ಬರು ಕಾಂಗ್ರೆಸ್ ಸದಸ್ಯರಾದ ಗ್ರೆಗರಿ ಮೀಕ್ಸ್ ಹಾಗೂ ಜಿಮ್ ಮೆಕ್‌ಡರ್ಮಟ್ ಅವರು ತಿಳಿಸಿದ್ದಾರೆ.
ಸಾಮ್ರಾಜ್ಯಶಾಹಿ ಅಮೆರಿಕದ ನೂತನ ಅಧ್ಯಕ್ಷರಾಗಿ ಅಧಿಕಾರದ ಗದ್ದುಗೆ ಏರಿದ ಒಬಾಮ ಅವರ ಆಯ್ಕೆಯ ಹಿಂದೆ ಭಾರತದೇಶ ಹಾಗೂ ಮಹಾತ್ಮಾ ಗಾಂಧಿ ಅವರ ಪಾತ್ರ ಮಹತ್ತರವಾದುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರ ಆದರ್ಶದ ಬುನಾದಿಯ ಮೇಲೆ ಬರಾಕ್ ಅವರು ಆಯ್ಕೆಯಾಗಿದ್ದಾರೆ.
ವಾಷಿಂಗ್ಟನ್‌ನ ಕ್ಯಾಪಿಟಲ್ ಹಿಲ್‌ನಲ್ಲಿ ಅಮೆರಿಕದಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುತ್ತಿರುವ ಸಂದರ್ಭದಲ್ಲಿ ವ್ಯಕ್ತಪಡಿಸಿದ ಮುಕ್ತ ಅನಿಸಿಕೆ ಇದು.
ಈ ಇಬ್ಬರು ನಾಯಕರು ಗಾಂಧೀಜಿಯಂತಹ ಆದರ್ಶ ಪುರುಷರನ್ನು ನೀಡಿದ ಭವ್ಯ ಪರಂಪರೆಯ ನಾಡಾದ ಭಾರತಕ್ಕ ನಿಜಕ್ಕೂ ಧನ್ಯ ಎಂದು ಹೇಳಿದರು. |