ಎರಡನೇ ವಿಶ್ವಸಮರದಲ್ಲಿ ಬಳಕೆಯಾದ ಬಾಂಬ್‌ವೊಂದು ಇಬ್ಬರು ವಿದ್ಯಾರ್ಥಿಗಳು ನೇರವಾಗಿ ಕ್ಲಾಸ್‌ರೂಮಿನೊಳಗೆ ಹೊತ್ತು ತರುವ ಮೂಲಕ ಶಿಕ್ಷಕರೆಲ್ಲಾ ಗಲಿಬಿಲಿಗೊಳಗಾದ ಘಟನೆ ಜಪಾನ್‌ನಲ್ಲಿ ನಡೆದಿದೆ.
ಸುಮಾರು 60ವರ್ಷಗಳ ಹಿಂದೆ ವಿಶ್ವದ ದೊಡ್ಣಣ್ಣ ಎರಡನೇ ವಿಶ್ವಸಮರವನ್ನು ಜಪಾನ್ ಮೇಲೆ ಸಾರುವ ಮೂಲಕ ಲಕ್ಷಾಂತರ ಜನರ ಮಾರಣಹೋಮ ನಡೆಸಿತ್ತು. ಆ ಸಂದರ್ಭದಲ್ಲಿ ಬಳಕೆಯಾದ ಬಾಂಬ್‌ವೊಂದು ಓಕಿನಾವಾ ಶಾಲಾ ಆವರಣದಲ್ಲಿ ಇದ್ದಿರುವುದನ್ನು ಕಂಡ 12ರ ಹರೆಯದ ಇಬ್ಬರು ವಿದ್ಯಾರ್ಥಿಗಳು ಅದನ್ನು ಹೊತ್ತು ಕ್ಲಾಸ್ ರೂಂನೊಳಕ್ಕೆ ತಂದಿದ್ದರು.
ಅಮೆರಿಕ-ಜಪಾನ್ ಯುದ್ಧ ನಡೆದು ಆರು ದಶಕಗಳೇ ಕಳೆದರೂ ಕೂಡ ಜಪಾನ್ ಹಲವು ಭಾಗಗಳಲ್ಲಿ ಈಗಲೂ ಇಂತಹ ನಿಷ್ಪ್ರಯೋಜಕ ಬಾಂಬ್‌ಗಳು ಕಾಣಸಿಗುತ್ತವೆ.
ಬಾಂಬ್ ಕಂಡ ತಕ್ಷಣವೇ ನಾವು ಸ್ಥಳೀಯ ಶಿಕ್ಷಣ ಮಂಡಳಿಗೆ ಸುದ್ದಿಯನ್ನು ಮುಟ್ಟಿಸುವ ಮೂಲಕ ಅಲ್ಲಿಂದ ಪೊಲೀಸರಿಗೆ ಮಾಹಿತಿ ರವಾನಿಸಲಾಗಿತ್ತು ಎಂದು ಶೋನಾನ್ ಪ್ರಾಥಮಿಕ ಶಾಲೆಯ ಉಪ ಪ್ರಾಂಶುಪಾಲರು ತಿಳಿಸಿದ್ದಾರೆ.
ನಿಷ್ಪ್ರಯೋಜಕವಾಗಿರುವ ಬಾಂಬ್ ತಮ್ಮ ಅಧ್ಯಯನಕ್ಕೊಂದು ಉತ್ತಮ ಸಾಮಗ್ರಿಯಾಗಬಹುದೆಂದು ಆಲೋಚಿಸಿ ಶಾಲೆಗೆ ತಂದಿರುವುದಾಗಿ ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಮೆರಿಕ ನಿರ್ಮಿತವಾಗಿರುವ ಈ ಬಾಂಬ್ ಸುಮಾರು 30ಸೆ.ಮಿ.ಉದ್ದ ಹೊಂದಿರುವುದಾಗಿ ತಿಳಿಸಿರುವ ಶಾಲಾ ಶಿಕ್ಷಕರು, ಕೂಡಲೇ ಅದನ್ನು ಜಪಾನ್‌ನ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಬಾಂಬ್ ಅನ್ನು ತೆಗೆದುಕೊಂಡು ಹೋಗಿರುವುದಾಗಿ ವಿವರಿಸಿದ್ದಾರೆ. |