ವಾಣಿಜ್ಯ ನಗರಿಯಲ್ಲಿ ಉಗ್ರರು ನಡೆಸಿದಂತೆ ಭಯೋತ್ಪಾದನೆ ದಾಳಿಯಂತಹ ದಾಳಿಗಳು ಮರುಕಳಿಸುವ ಭಯ ದೂರ ಮಾಡುವಂತ ಕ್ರಮಗಳನ್ನು ಪಾಕಿಸ್ತಾನ ಕೈಗೊಳ್ಳಬೇಕೆಂದು ಅಧ್ಯಕ್ಷ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ರಿಪಬ್ಲಿಕನ್ ಪಕ್ಷದ ಜಾನ್ ಮೆಕೇನ್ ತಿಳಿಸಿದ್ದಾರೆ.
ಮುಂಬೈ ಭಯೋತ್ಪಾದನೆ ದಾಳಿ ಕುರಿತಂತೆ ಸೆನೆಟ್ ಸಮಿತಿ ಸಭೆಯಲ್ಲಿನ ಚರ್ಚೆಯ ಮುಕ್ತಾಯದ ಹಂತದಲ್ಲಿ ಮಾತನಾಡುತ್ತಿದ್ದ ಮೆಕೇನ್, ದಾಳಿ ಹಿಂದಿನ ಆರೋಪಿಗಳನ್ನು ಬಂಧಿಸುವುದು, ಉಗ್ರರ ನೆಲೆಗಳನ್ನು ನಾಶ ಮಾಡಿ, ಅವುಗಳನ್ನು ಮುಚ್ಚುವ ಕಾರ್ಯಗಳಿಗೆ ಪಾಕಿಸ್ತಾನ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ಪಾಕಿಸ್ತಾನದೊಳಗೆ ಹಾಗೂ ಗಡಿಭಾಗದಲ್ಲಿ ನಡೆಯುತ್ತಿರುವ ಭಯೋತ್ಪಾದನೆಯನ್ನು ನಿಗ್ರಹಿಸಬೇಕು ಎಂಬುದಾಗಿ ಅಮೆರಿಕ ಈಗಾಗಲೇ ಸಾಕಷ್ಟು ಬಾರಿ ಎಚ್ಚರಿಕೆಯನ್ನು ನೀಡಿದೆ. ಆ ನಿಟ್ಟಿನಲ್ಲಿ ಪಾಕ್ ಕ್ರಮಕ್ಕೆ ಮುಂದಾಗಬೇಕು ಎಂದು ಮೆಕೇನ್ ಹೇಳಿದ್ದಾರೆ. |