ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಉಗ್ರರ ದಾಳಿ 'ಸ್ಪಂಜ್'ನಂತೆ ಹೀರಿಕೊಂಡ ಭಾರತ: ಯುಎಸ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರರ ದಾಳಿ 'ಸ್ಪಂಜ್'ನಂತೆ ಹೀರಿಕೊಂಡ ಭಾರತ: ಯುಎಸ್
ಲಷ್ಕರ್ ಇ ತೋಯ್ಬಾದ ಭಯೋತ್ಪಾದನಾ ಆಂದೋಲನದಿಂದ ಅಮೆರಿಕವನ್ನು ಮತ್ತು ಪಾಶ್ಚಾತ್ಯರನ್ನು ರಕ್ಷಿಸುತ್ತಿದ್ದ ಭಾರತವು 'ಸ್ಪಂಜ್'ನಂತಾಗಿದ್ದು, ಪಾಕಿಸ್ತಾವನದ ಭಯೋತ್ಪಾದಕ ಸಂಘಟನೆಗಳು ಒಡ್ಡುತ್ತಿದ್ದ ಹೆಚ್ಚಿನ ಹೊಡೆತಗಳನ್ನು ಹೀರಿಕೊಳ್ಳುತ್ತಿತ್ತು ಎಂದು ಅಮೆರಿಕದ ಸೆನೆಟಸಮಿತಿಗೆ ಗುರುವಾರ ತಿಳಿಸಲಾಯಿತು.

ಮುಂಬಯಿ ದಾಳಿಗಳಿಗೆ ಕಾರಣ ಎನ್ನಲಾಗುತ್ತಿರುವ ಲಷ್ಕರ್, ನಿಜವಾಗಿಯೂ ಜಾಗತಿಕವಾಗಿ ಆತಂಕಕ್ಕೆ ಕಾರಣವಾಗಿರುವ ಭಯೋತ್ಪಾದಕ ಸಂಘಟನೆಯಾಗಿದ್ದು, ಒಸಾಮ ಬಿನ್ ಲಾಡೆನ್‌ನ ಅಲ್ ಖಾಯಿದಾ ಬಳಿಕದ ಪ್ರಾದೇಶಿಕ ಮತ್ತು ಜಾಗತಿಕ ಭದ್ರತೆಗೆ ಅಪಾಯವೊಡ್ಡುತ್ತಿರುವ ಎರಡನೇ ಭಯೋತ್ಪಾದನಾ ಸಂಸ್ಥೆ ಎಂದು ಕಾರ್ಯತಂತ್ರ ಸಲಹೆಗಾರ ಮತ್ತು ನೀತಿನಿರೂಪಣೆಯ ಪ್ರಭಾವೀ ಸಲಹೆಗಾರರೂ ಆಗಿರುವ ಆಶ್ಲೆ ಜೆ ಟೆಲ್ಲಿಸ್ ಹೇಳಿದ್ದಾರೆ.

ನವೆಂಬರ್ 26ರ ಮುಂಬಯಿ ದಾಳಿ ಮತ್ತು ಅದು ಅಮೆರಿಕದ ಮೇಲೆ ಬೀರುವ ಪ್ರಭಾವಗಳ ಕುರಿತು ಬುಧವಾರ ತವರಿನ ಭದ್ರತೆ ಮತ್ತು ಸರಕಾರೀ ವ್ಯವಹಾರಗಳ ಸೆನೆಟ್ ಸಮಿತಿಯೆದುರು ಹಾಜರಾಗಿ ವಿವರಣೆ ನೀಡುತ್ತಾ ಅಂತಾರಾಷ್ಟ್ರೀಯ ಶಾಂತಿಗಾಗಿ ಇರುವ ಕಾರ್ನೀಜಿ ಎಂಡೋಮೆಂಟ್‌ನ ಹಿರಿಯ ಸಹಾಯಕರಾಗಿರುವ ಟೆಲ್ಲಿಸ್ ಈ ವಿಷಯ ಬಿಚ್ಚಿಟ್ಟರು.,

"ದುರದೃಷ್ಟಕರವಾಗಿ ಭಾರತವು ನಮ್ಮನ್ನೆಲ್ಲಾ ರಕ್ಷಿಸುವ 'ಸ್ಪಂಜ್' ಆಗಿಬಿಟ್ಟಿದೆ. ಕಳೆದ ಮೂವತ್ತು ವರ್ಷಗಳಲ್ಲಿ ಜಾಗತಿಕ ಭಯೋತ್ಪಾದನೆಯ ಕೇಂದ್ರಬಿಂದುವಾಗಿರುವ ಪಾಕಿಸ್ತಾನದೊಂದಿಗೆ ಭಾರತದ ಸಂಬಂಧದ ಫಲಿತಾಂಶವಾಗಿ ಈ ಭಯೋತ್ಪಾದನಾ ಗುಂಪುಗಳು ನಡೆಸುತ್ತಿರುವ ರಾದ್ಧಾಂತವನ್ನು, ನೀಡುತ್ತಿದ್ದ ಹೊಡೆತಗಳ ಬಿಸಿಯನ್ನು ನವದೆಹಲಿಯು ಹೀರಿಕೊಳ್ಳುವುದರಲ್ಲೇ ನಿರತವಾಗಿತ್ತು" ಎಂದು ಅವರು ವಿವರಿಸಿದರು.

ನೂತನ ಅಧ್ಯಕ್ಷ ಬರಾಕ್ ಒಬಾಮ ಆಡಳಿತವು ಪಾಕಿಸ್ತಾನದ "ಕಾಲನ್ನು ಬೆಂಕಿಯಲ್ಲಿರಿಸಿ" ಅದು ಭಯೋತ್ಪಾದನಾ ಸಂಘಟನೆಗಳ ನಿಗ್ರಹದ ನಿಟ್ಟಿನಲ್ಲಿ ನೀಡಿರುವ ಭರವಸೆಯ ಮಾತುಗಳನ್ನು ಈಡೇರಿಸುವಂತೆ ನೋಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಈ ಕಾರಣಕ್ಕೆ, ಲಷ್ಕರ್ ಸಂಘಟನೆಯ ಬೇರುಗಳನ್ನು ಬುಡಸಹಿತ ಕಿತ್ತು ಹಾಕುವಂತೆ ಪಾಕಿಸ್ತಾನದ ಮೇಲೆ ಅಮೆರಿಕವು ಒತ್ತಡ ಹೇರುತ್ತಿರಬೇಕು ಎಂದು ತಿಳಿಸಿದ ಅವರು, ಮುಂಬಯಿ ದಾಳಿ ಕುರಿತು ಭಾರತದ ಪ್ರತಿಕ್ರಿಯೆ "ಅಸಮರ್ಪಕವಾಗಿತ್ತು" ಎಂದು ಬಣ್ಣಿಸಿದರಲ್ಲದೆ, ಭಾರತವು ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ-ನಿಗ್ರಹ ಕೇಂದ್ರದ ಮಾದರಿಯಲ್ಲೇ ಸಂಸ್ಥೆಯೊಂದನ್ನು ಹುಟ್ಟು ಹಾಕಿ, ಅಮೆರಿಕದ ಸಹಾಯ ಪಡೆಯಬೇಕೆಂದು ಸಲಹೆ ನೀಡಿದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉಗ್ರರ ಕೃತ್ಯಕ್ಕೆ ಪಾಕ್ ನೆಲದಲ್ಲಿ ಅವಕಾಶವಿಲ್ಲ: ಗಿಲಾನಿ
ಮುಂಬೈ ಘಟನೆ ಮತ್ತೆ ಮರುಕಳಿಸಬಾರದು: ಮೆಕೇನ್
ಜಪಾನ್: ಕ್ಲಾಸ್‌‌ನೊಳಗೆ ಬಾಂಬ್ ಹೊತ್ತೊಯ್ದ ವಿದ್ಯಾರ್ಥಿಗಳು!
ಅಫ್ಘಾನ್‌‌ ಕುರಿತ ಅಮೆರಿಕ ನೀತಿ ವಿಫಲ: ಗಿಲಾನಿ
ಮುಂಬೈ ದಾಳಿ ಅಮೆರಿಕದ ಸಮಸ್ಯೆಯೂ ಆಗಿದೆ: ಇಂಡೋ ಅಮೆರಿಕನ್
ಬರಾಕ್ ಸುತ್ತ 'ಮಹಾತ್ಮನ ಪ್ರಭಾವಲಯ'