ಅಮೆರಿಕದ ಮಾಜಿ ಅಧ್ಯಕ್ಷ ಕ್ಲಿಂಟನ್ ಪತ್ನಿ ಹಿಲರಿ ಅವರನ್ನು ಬರಾಕ್ ಆಡಳಿತದಲ್ಲಿ ವಿದೇಶಾಂಗ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಜ್ಯುಡಿಸಿಯಲ್ ವಾಚ್ ಎಂಬ ಸಂಘಟನೆಯೊಂದು ಕೋರ್ಟ್ ಮೆಟ್ಟಿಲೇರಿದೆ.
ಹಿಲರಿ ಕ್ಲಿಂಟನ್ ಅವರನ್ನು ವಿದೇಶಾಂಗ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಿರುವುದು ಸಂವಿಧಾನಬಾಹಿರ ಎಂದು ಆರೋಪಿಸಿರುವ ವಾಷಿಂಗ್ಟನ್ ಮೂಲದ ವಾಚ್‌ಡಾಗ್ ಸಂಘಟನೆಯ ಕೋರ್ಟ್‌ನಲ್ಲಿ ದಾವೆ ಹೂಡಿದೆ.
ಸಂವಿಧಾನಬದ್ದವಾಗಿ ಹಿಲರಿ ಕ್ಲಿಂಟನ್ ಅವರ ಆಯ್ಕೆ ಅಸಿಂಧುವಾಗಿದೆ ಎಂದು ಆಪಾದಿಸಿದೆ. ಅಲ್ಲದೇ ಅಮೆರಿಕದ ವಿದೇಶಾಂಗ ಕಚೇರಿಯಲ್ಲಿ ಡಿಪ್ಲೋಮೆಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಡೇವಿಡ್ ಸಿ ರೋರ್ಡೆರ್‌ಮಲ್ ಅವರ ಜತೆಯಲ್ಲಿ ಕೆಲಸ ಮಾಡುವುದನ್ನು ಒಪ್ಪುವುದಿಲ್ಲ ಎಂದು ಜ್ಯುಡಿಸಿಯಲ್ ವಾಚ್ ಪ್ರಕಟಣೆಯಲ್ಲಿ ತಿಳಿಸಿದೆ. |