ಇಸ್ರೇಲ್ ವಿಚಾರಕ್ಕೆ ಸಂಬಂಧಿಸಿದಂತೆ ಬರಾಕ್ ಒಬಾಮ ಮತ್ತು ಜಾರ್ಜ್ ಡಬ್ಲ್ಯು ಬುಷ್ ಇಬ್ಬರಲ್ಲೂ ಯಾವುದೇ ವ್ಯತ್ಯಾಸ ಇಲ್ಲ ಎಂದು ಲೆಬನಾನ್‌ನ ಹಿಜ್‌ಬುಲ್ಲಾ ಮುಖಂಡ ಆರೋಪಿಸಿದ್ದು, ಅಮೆರಿಕದ ನೂತನ ಆಡಳಿತ ಕೂಡ ಜ್ಯೂವಿಸ್‌ಗಳಿಗೆ ಪೂರ್ಣಪ್ರಮಾಣದ ಬೆಂಬಲ ನೀಡುತ್ತಿದೆ ಎಂದು ಕಿಡಿಕಾರಿದ್ದಾನೆ.
ಪ್ಯಾಲೇಸ್ತೇನ್ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಗೆ ಅಮೆರಿಕದ ನೂತನ ಆಡಳಿತ ಬಂದ ನಂತರ ಮತ್ತಷ್ಟು ಬೆಂಬಲ ದೊರೆತಂತಾಗಿದೆ ಎಂದು ನಾಸ್ರಲ್ಲಾ ತನ್ನ ಅಡಗುತಾಣದಿಂದ ವೀಡಿಯೋ ಲಿಂಕ್ ಮೂಲಕ ಕಳುಹಿಸಿದ ಸಂದೇಶದಲ್ಲಿ ಹರಿಹಾಯ್ದಿದ್ದಾನೆ. ಆದರೆ ಇಸ್ರೇಲ್ ವಿಚಾರದಲ್ಲಿ ಬುಷ್ ಹಾಗೂ ಒಬಾಮ ಆಡಳಿತ ಎರಡೂ ಒಂದೇ ತೆರನಾಗಿ ನಡೆದುಕೊಳ್ಳುತ್ತಿದೆ ಎಂದಿದ್ದಾನೆ.
ಇಸ್ರೇಲ್ ಕಳೆದ 22ದಿನಗಳ ಕಾಲ ಪ್ಯಾಲೇಸ್ತೇನಿನ ಗಾಜಾಪಟ್ಟಿ ಮೇಲೆ ಭೀಭತ್ಸವಾದ ದಾಳಿಯನ್ನು ನಡೆಸಿದರೂ ಕೂಡ, ಇಸ್ರೇಲ್ ತನ್ನ ಗುರಿ ಸಾಧಿಸುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದ್ದಾನೆ. ಹಿಜ್‌ಬುಲ್ಲಾ ಮತ್ತು ಹಮಾಸ್ ಮೈತ್ರಿ ಸಂಘಟನೆಯಾಗಿದ್ದು, ಅವು ಇರಾನ್ ಮತ್ತು ಸಿರಿಯಾದ ಬೆಂಬಲಿಗ ಸಂಘಟನೆಗಳಾಗಿವೆ.
ಇಸ್ರೇಲ್ ಹತ್ಯೆ ಸಂಚು ರೂಪಿಸಿರುವುದರಿಂದ ಕಳೆದ 2006ರ ಜುಲೈ ನಂತರ ನಾಸ್ರಲ್ಲಾ ಸಾರ್ವಜನಿಕವಾಗಿ ಕಾಣಿಸದೆ, ರಹಸ್ಯತಾಣದಲ್ಲಿ ಅಡಗಿದ್ದಾನೆ. ಕಳೆದ ವರ್ಷ ಉನ್ನತ ಕಮಾಂಡರ್ ಇಮಾದ್ ಮುಗಾನಿಯೆ ಡಮಾಸ್ಕನ್‌ಲ್ಲಿ ನಡೆದ ಕಾರ್ ಸ್ಫೋಟದಲ್ಲಿ ಸಾವನ್ನಪ್ಪಿದ್ದು, ಅದಕ್ಕೆ ತಾನು ಸರಿಯಾದ ಸಂದರ್ಭದಲ್ಲಿಯೇ ಪ್ರತಿಕಾರ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾನೆ. |