ಮುಂಬೈ ಭಯೋತ್ಪಾದಕ ದಾಳಿಯ ಸಂಚು ರೂಪಿಸಲು ಪಾಕಿಸ್ತಾನ ನೆಲವನ್ನು ಬಳಸಲಾಗಿಲ್ಲ ಎಂದು ಬ್ರಿಟನ್‌ನಲ್ಲಿ ಪಾಕ್ ರಾಯಭಾರಿಯಾಗಿರುವ ಶಮ್ಯುಲ್ ಹನಸ್ ಹೇಳಿದ್ದಾರೆ.
ನಮಗೆ ಗೊತ್ತಿರುವಂತೆ ಪಾಕಿಸ್ತಾನ ನೆಲವನ್ನು ಸಂಚು ನಡೆಸಲು ಬಳಸಲಾಗಿಲ್ಲ ತನಿಖಾಧಿಕಾರಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ. ಬೇರೆ ಯಾವುದಾದರೂ ದೇಶದಲ್ಲಿ ಕುಳಿತು ಸಂಚು ರೂಪಿಸಿರಬಹುದು,ಅದು ಇಂಗ್ಲೆಂಡೂ ಅಲ್ಲ ಎಂದವರು ಹೇಳಿದ್ದಾರೆ.
ನಾವು ಯಾವುದೇ ರೀತಿಯಲ್ಲಿ ತಿಪ್ಪೆ ಸಾರುತ್ತಿಲ್ಲ, ನಾವು ಸತ್ಯಾನ್ವೇಷಣೆಯಲ್ಲಿ ತೊಡಗಿದ್ದೇವೆ. ನಮಗೆ ಏನು ಗೊತ್ತಾದರೂ ಅದನ್ನು ಭಾರತದ ಮುಂದಿಟ್ಟು ಸಮಾಧಾನ ಪಡಿಸಲು ಯತ್ನಿಸುತ್ತೇವೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು. |