ಅಧ್ಯಕ್ಷೀಯ ಚುನಾವಣೆಯಲ್ಲಿ ಪಕ್ಷ ಸೋಲುಕಂಡಿರುವ ಹಿನ್ನೆಲೆಯಲ್ಲಿ, ಪಕ್ಷವನ್ನು ಸಮರ್ಥವಾಗಿ ಬಲಪಡಿಸುವ ನಿಟ್ಟಿನಲ್ಲಿ ರಿಪಬ್ಲಿಕನ್ ಪಕ್ಷದ ಸಾರಥ್ಯವನ್ನು ಕಪ್ಪು ವರ್ಣೀಯ ಮಾರಿಲ್ಯಾಂಡ್‌ನ ಮಾಜಿ ರಾಜ್ಯಪಾಲ, ಲೆಫ್ಟಿನೆಂಟ್ ಮೈಕೆಲ್ ಸ್ಟೀಲೆ ಅವರಿಗೆ ವಹಿಸಿದೆ.
ಕಪ್ಪು ಅಮೆರಿಕನ್ ಆಗಿರುವ ಸ್ಟೀಲೆ(50) ಉತ್ತಮ ವಾಗ್ಮಿಯಾಗಿದ್ದು, ರಿಪಬ್ಲಿಕನ್ ಪಕ್ಷವನ್ನು ಸಮರ್ಥವಾಗಿ ಕಟ್ಟಿಬೆಳೆಸಲು ಅವರನ್ನೇ ಆಯ್ಕೆ ಮಾಡಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.
ಡೆಮೋಕ್ರಟ್ ಪಕ್ಷದ ಬರಾಕ್ ಎದುರಾಳಿಯಾಗಿ ರಿಪಬ್ಲಿಕನ್ ನ್ಯಾಷನಲ್ ಸಮಿತಿಯ ಅಧ್ಯಕ್ಷರಾಗಿ ಸ್ಟೀಲೆ ಅವರನ್ನು ಆಯ್ಕೆ ಮಾಡಲಾಗಿದ್ದು, ಪಕ್ಷವನ್ನು ಬಲಪಡಿಸುವ ಗುರುತರವಾದ ಜವಾಬ್ದಾರಿ ಅವರ ಮೇಲಿದೆ. ಪ್ರಥಮ ಬಾರಿಗೆ ರಿಪಬ್ಲಿಕನ್ ಪಕ್ಷದ ಕಪ್ಪು ವರ್ಣಿಯ ಅಧ್ಯಕ್ಷರಾಗಿ ಇತ್ತೀಚೆಗಷ್ಟೇ ಅಧಿಕಾರ ಸ್ವೀಕರಿಸಿದ್ದರು.
ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ರಿಪಬ್ಲಿಕನ್ ಪಕ್ಷವನ್ನು ಉತ್ತಮ ಆದರ್ಶಗಳ ಮೇಲೆ ಕಟ್ಟಿ ಬೆಳೆಸಲು ಶ್ರಮಿಸುವುದಾಗಿ ಸ್ಟೇಲೆ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ. |