ವಾಣಿಜ್ಯ ನಗರಿ ಮುಂಬೈ ಮೇಲೆ ಕಳೆದ ವರ್ಷ ನಡೆದ ಭಯೋತ್ಪಾದನಾ ದಾಳಿಯಲ್ಲಿ ಸಂತ್ರಸ್ತರಾದವರಿಗೆ ಅಮೆರಿಕ ಮೂಲದ ಸಂಸ್ಥೆಯೊಂದು ಒಂದೇ ದಿನದಲ್ಲಿ 51ಸಾವಿರ ಅಮೆರಿಕನ್ ಡಾಲರ್ ಹಣ ಸಂಗ್ರಹಿಸಿದೆ.
ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಸಮುದಾಯ ಸಂಘಟನೆ ಉಗ್ರರ ದಾಳಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ದಿಸೆಯಲ್ಲಿ ಈ ನಿಧಿ ಸಂಗ್ರಹಿಸಿತು. ಈ ಕಾರ್ಯಕ್ರಮದಲ್ಲಿ ಸುಮಾರು 500 ಜನರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಉಗ್ರರ ದಾಳಿಯಲ್ಲಿನ ಸಂತ್ಸಸ್ತರಿಗಾಗಿ ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಸಮುದಾಯ ಸಂಘಟನೆ ಸೇರಿದಂತೆ ಇನ್ನೂ ಹೆಚ್ಚು ಧನಸಂಗ್ರಹಿಸುವ ನಿಟ್ಟಿನಲ್ಲಿ ಸ್ಯಾನ್‌ಫ್ರಾನ್ಸಿಸ್ಕೋ ಹಾಗೂ ಚಿಕಾಗೋ ಸಂಘಟನೆ ಕೂಡ ಕೈಗೂಡಿಸಿದೆ.
ಆದರೆ ಈವರೆಗೆ ಒಟ್ಟು ಎಷ್ಟು ಹಣ ಸಂಗ್ರಹಿಸಲಾಗಿದೆ ಎಂಬುದು ಖಚಿತವಾಗಿ ತಿಳಿದುಬಂದಿಲ್ಲ. ಈ ನಿಧಿಯನ್ನು ಅಮೆರಿಕದಲ್ಲಿರುವ ಭಾರತೀಯ ಫೌಂಡೇಶನ್‌ಗೆ(ಎಐಎಫ್) ಒಪ್ಪಿಸಲಾಗುವುದು ಎಂದು ಸಂಘಟನೆಗಳು ಹೇಳಿವೆ.
ಒಟ್ಟುಗೂಡಿದ ಹಣವನ್ನು ಫೌಂಡೇಶನ್ ಮೂಲಕ ತಾಜ್ ಪಬ್ಲಿಕ್ ವೆಲ್‌ಫೇರ್ ಟ್ರಸ್ಟ್, ಒಬೇರಾಯ್ ಕೇರ್ ಫಂಡ್, ಬೊಂಬೈ ಕಮ್ಯುನಿಟಿ ಟ್ರಸ್ಟ್ ಹಾಗೂ ಇನ್ನಿತರ ಸಂಘಟನೆಗಳಿಗೆ ನೆರವನ್ನು ಕಳುಹಿಸಿ, ದಾಳಿಯ ಸಂತ್ರಸ್ತರಿಗೆ ಶೀಘ್ರವೇ ವಿತರಿಸುವಂತೆ ಕೋರಲಾಗುವುದು ಎಂದು ವಿವರಿಸಿದೆ. |