ಮುಂಬೈ ದಾಳಿ ಕುರಿತ ತನಿಖೆ ಪೂರ್ಣಗೊಂಡಿರುವುದಾಗಿ ಪಾಕಿಸ್ತಾನ ತಿಳಿಸಿದ್ದು, ಭಾರತಕ್ಕೆ ಪ್ರತಿಕ್ರಿಯೆ ನೀಡಲು ತಯಾರಿರುವುದಾಗಿ ಹೇಳಿದೆ. ಅಲ್ಲದೇ ವರದಿಯನ್ನು ಆಂತರಿಕ ಸಚಿವಾಲಯಕ್ಕೆ ಕಳುಹಿಸುವುದಾಗಿಯೂ ತಿಳಿಸಿದೆ.
ಆದರೆ ಮುಂಬೈ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ನಡೆಸುತ್ತಿರುವ ತನಿಖೆ ಕಣ್ಣು ಒರೆಸುವ ತಂತ್ರ ಎಂದು ಭಾರತ ಕಿಡಿಕಾರಿದೆ. ಈವರೆಗೂ ಪಾಕಿಸ್ತಾನ ವಿದೇಶಾಂಗ ಸಚಿವಾಲಯದಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದಿದೆ.
ಪಾಕ್ ತನಿಖೆ ಹಾಗೂ ಮುಂಬೈ ದಾಳಿಯ ಸಂಚು ನಡೆದಿರುವುದು ಪಾಕಿಸ್ತಾನದಲ್ಲಿ ಅಲ್ಲ ಎಂಬ ಬ್ರಿಟನ್ ಕಮೀಷನರ್ ಹೇಳಿಕೆಗೆ ಭಾರತ ಕಟುವಾಗಿ ಪ್ರತಿಕ್ರಿಯಿಸಿದೆ.
ದಾಳಿಯ ಕುರಿತಂತೆ ದೇಶದ ಫೆಡರಲ್ ಇನ್ವೆಸ್ಟಿಗೇಶನ್ ಏಜೆನ್ಸಿ ತನಿಖೆಯನ್ನು ಪೂರ್ಣಗೊಳಿಸಿದ್ದು, ವರದಿಯನ್ನು ಆಂತರಿಕ ಸಚಿವಾಲಯಕ್ಕೆ ನೀಡಿರುವುದಾಗಿ ಪಾಕಿಸ್ತಾನದ ಆಂತರಿಕ ಸಚಿವ ರೆಹಮಾನ್ ಮಲಿಕ್ ತಿಳಿಸಿದ್ದಾರೆ. ಇದೀಗ ಕಾನೂನಿನ ನಿಟ್ಟಿನಲ್ಲಿ ಪರಿಶೀಲನೆ ಮಾಡುವುದು ಬಾಕಿ ಉಳಿದಿರುವುದಾಗಿ ಹೇಳುವ ಮೂಲಕ ಮತ್ತೂ ಇಬ್ಬಗೆಯ ಧೋರಣೆಯನ್ನೇ ಮುಂದುವರಿಸಿದೆ. |