ಇತ್ತೀಚೆಗಷ್ಟೇ ಶ್ವೇತ ಭವನ ಪ್ರವೇಶಿಸಿದ ರಾಷ್ಟ್ರದ ಪ್ರಥಮ ಮಹಿಳೆ ಮಿಶಿಲ್ಲೆ ಒಬಾಮಾ ಗರ್ಭಿಣಿಯಾಗಿದ್ದು, ಅವರು ಶ್ವೇತಭವನದಲ್ಲೇ ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ಬ್ರಿಟನ್ ಮಾಧ್ಯಮಗಳ ವರದಿ ತಿಳಿಸಿದೆ.
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಪತ್ನಿ ಮಿಶಿಲ್ಲೆ ಒಬಾಮಾ ಗರ್ಭಿಣಿಯಾಗಿದ್ದು, ಶೀಘ್ರದಲ್ಲೇ ಮೂರನೇ ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ಡೈಲಿ ಸ್ಟಾರ್ ವರದಿ ಹೇಳಿದೆ.
45ರ ಹರೆಯದ ಮಿಶೆಲ್ಲೆಗೆ ಈಗಾಗಲೇ ಮಾಲಿಯಾ(10) ಹಾಗೂ ಸುಶಾ(7) ಎಂಬಿಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೂರನೇ ಮಗು ನಿಜಕ್ಕೂ ಗಂಡಾಗಲಿದೆ ಎಂದು ವರದಿಯಲ್ಲಿ ಭವಿಷ್ಯ ಕೂಡ ನುಡಿಯಲಾಗಿದೆ.
ಮಿಶೆಲ್ಲೆ ಗರ್ಭವತಿಯೇ?ಹಾಗದರೆ ಅದು ಸಂತೋಷದ ವಿಚಾರ, ಗಂಡು ಮಗುವಾದರೆ ಇನ್ನೂ ಒಳ್ಳೆಯದು ಎಂದು ವಾಷಿಂಗ್ಟನ್‌ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಆದರೆ ಇದಕ್ಕೂ ಮುನ್ನ ಒಬಾಮಾ ದಂಪತಿಗಳು ಮೂರನೇ ಮಗು ತಮಗೆ ಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದೊಂದು ಗಾಸಿಫ್ ಸುದ್ದಿ ಎಂದು ಶ್ವೇತಭವನದ ಮೂಲಗಳು ಹೇಳಿವೆ. ಆದರೆ ಬ್ರಿಟನ್ ಪತ್ರಿಕೆಯ ವರದಿ, ಒಬಾಮಾ ದಂಪತಿಗಳಿಗೆ ಹುಟ್ಟಲಿರುವ ಮಗುವಿಗೆ ಅಡ್ಡಹೆಸರನ್ನೂ ಇಟ್ಟು ಬಿಟ್ಟಿದೆ. ಮೂರನೇ ಮಗುವಿಗೆ ಅಮೆರಿಕಾದ 'ಲೇಡಿ ಡಯಾನಾ 'ಎಂಬುದಾಗಿ ಹೇಳಿದೆ!!
|