ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರ ಸಹೋದರ ಜಾರ್ಜ್ ಒಬಾಮಾ ಮಾರಿಜುವಾನಾ(ಅಮಲುಪದಾರ್ಥ) ಹೊಂದಿದ್ದ ಆರೋಪದ ಮೇಲೆ ಕೀನ್ಯಾ ಪೊಲೀಸರು ಶನಿವಾರ ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಮಾರಿಜುವಾನಾ ಹೊಂದಿದ್ದ ಆರೋಪದ ಮೇಲೆ ಜಾರ್ಜ್ ಒಬಾಮಾನನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಕೀನ್ಯಾ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಅಮಲು ಪದಾರ್ಥವಾದ ಕೆನ್ನಾಬಿಸ್ ಅನ್ನು ಇರಿಸಿಕೊಂಡಿದ್ದ ಆರೋಪದ ಮೇಲೆ ಒಬಾಮಾನನ್ನು ಸೆರೆ ಹಿಡಿದಿರುವುದಾಗಿ ಮಾಹಿತಿ ನೀಡಿರುವ ಇನ್ಸ್‌ಪೆಕ್ಟರ್ ಆಗಸ್ಟಿನ್ ಮುತೆಂಬೈ, ಬಂಧಿಸುವ ಸಂದರ್ಭದಲ್ಲಿ ಆತ ವಿರೋಧ ವ್ಯಕ್ತಪಡಿಸಿರುವುದಾಗಿ ಹೇಳಿದರು. ಆತನನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದರು.
ನೈರೋಬಿ ರಾಜಧಾನಿಯ ಹರ್ಮನ್ ಪೊಲೀಸ್ ಪೋಸ್ಟ್‌ನಲ್ಲಿ ಬಂಧಿಸಲಾಗಿತ್ತು. ಬಂಧಿಸಿರುವ ಸಂದರ್ಭದಲ್ಲಿ ಸಿಎನ್‌ಎನ್ ಜತೆ ಮಾತನಾಡಿದ ಒಬಾಮಾ ತನ್ನ ಮೇಲಿನ ಆರೋಪ ನಿರಾಧಾರ ಎಂದು ತಿಳಿಸಿದ್ದ. ಅಲ್ಲದೇ ಪೊಲೀಸರು ತನ್ನನ್ನು ಮನೆಯಲ್ಲಿ ಬಂಧಿಸಿದ್ದರು. ಅವರು ಯಾಕಾಗಿ ತನ್ನನ್ನು ಬಂಧಿಸಿದ್ದಾರೆಂಬುದು ತಿಳಿದಿಲ್ಲ ಎಂದು ಹೇಳಿದ್ದಾನೆ.
|