ಯುದ್ದ ವಿರಾಮ ತಳ್ಳಿಹಾಕಿರುವ ಶ್ರೀಲಂಕಾ ಸೇನೆ ಶನಿವಾರ ಮತ್ತೆ ಗುಂಡಿನ ಮೊರೆತ ಆರಂಭಿಸಿದ್ದು, ಅಂತಿಮವಾಗಿ ಎಲ್‌ಟಿಟಿಇ ಪ್ರಾಬಲ್ಯ ಹೊಂದಿರುವ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಮುನ್ನುಗ್ಗಿದೆ. ಇದೇ ವೇಳೆ ಮುಲ್ಲೈತೀವು ಕರಾವಳಿಯಲ್ಲಿ ಉಗ್ರರ ಆತ್ಮಹತ್ಯಾ ಬೋಟ್ ದಾಳಿಯನ್ನು ಸೇನೆ ವಿಫಲಗೊಳಿಸಿದೆ.
ಲಿಫ್ಟ್ ಹೊಂದಿದ ಅತ್ಯಾಧುನಿಕ ಐಷಾರಾಮಿ ಬಂಕರ್ ಅನ್ನು ಕೂಡಾ ಸೇನೆ ವಶಪಡಿಸಿಕೊಂಡಿದ್ದು , ಈ ಬಂಕರ್‌ನಲ್ಲಿ ಎಲ್‌ಟಿಟಿಇ ನಾಯಕ ವೇಲುಪಿಳ್ಳೈ ಪ್ರಭಾಕರನ್ ವಾಸಿಸುತ್ತಿದ್ದ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಕಳೆದ ಕೆಲವು ವಾರಗಳಿಂದ ನಡೆದ ಕಾರ್ಯಾಚರಣೆಯಲ್ಲಿ ಸೇನೆ ವಶಪಡಿಸಿಕೊಳ್ಳುತ್ತಿರುವ ಮೂರನೇಯ ಐಷಾರಾಮಿ ಬಂಕರ್ ಇದಾಗಿದೆ. ಇದೀಗ ಸೇನೆಯ ಮುಖ್ಯ ಗುರಿ ಎಲ್‌ಟಿಟಿಇ ನಾಯಕ ಪ್ರಭಾಕರನ್ ಮತ್ತು ಇತರೆ ನಾಯಕರನ್ನು ಬಂಧಿಸುವುದಾಗಿದೆ. |