ಮಾಸ್ಕೋ: ಪ್ರಧಾನ ಮಂತ್ರಿ ವ್ಲಾದಿಮಿರ್ ಪುಟಿನ್ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸುತ್ತಿರುವುದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಹಲವು ಕಾರ್ಯಕರ್ತರನ್ನು ರಷ್ಯಾ ಭದ್ರತಾ ಪಡೆಗಳು ಬಂಧಿಸಿದ್ದಾರೆ. ನಿಷೇಧಿತ ನ್ಯಾಷನಲ್ ಬೋಲ್ಷೆವಿಕ್ ಪಕ್ಷದ ಅಧ್ಯಕ್ಷ ಇಡ್ವರ್ಡ್ ಲಿಮೊನೊವ್ ಕೇಂದ್ರ ಮಾಸ್ಕೋದಲ್ಲಿ ಪ್ರತಿಭಟನಾ ಸಭೆಯನ್ನು ಉದ್ದೇಶಿ ಭಾಷಣ ಮಾಡುವ ಮುನ್ನ ಭದ್ರತಾ ಪಡೆಗಳು ಅವರನ್ನು ಹಾಗೂ ಇತರ ಕಾರ್ಯಕರ್ತರನ್ನು ಬಂಧಿಸಿದ್ದಾರೆ. |