ಪೆಟ್ರೋಲ್ ಟ್ಯಾಂಕರ್‌ವೊಂದು ಸ್ಫೋಟಗೊಂಡ ಪರಿಣಾಮ ನೂರಾರು ಜನರು ಅಪಾಯದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಕೂಡ, ಸುಮಾರು 100ಕ್ಕೂ ಅಧಿಕ ಮಂದಿ ಬಲಿಯಾಗಿದ್ದು, 200ಜನರು ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.
ಏಕಾಏಕಿ ಪೆಟ್ರೋಲ್ ಟ್ಯಾಂಕರ್ ಸ್ಫೋಟಗೊಂಡಾಗ ದಿಕ್ಕಾಪಾಲಾಗಿ ಜನರು ಪ್ರಾಣಾಪಾಯದಿಂದ ತಪ್ಪಿಸಿಕೊಳ್ಳಲು ಯತ್ನಿಸಿದರು 111ಮಂದಿ ಸಾವನ್ನಪ್ಪಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮಕ್ಕಳು ಸೇರಿದಂತೆ ನೂರಾರು ಜನರನ್ನು ದಾಖಲಿಸಲಾಗಿದೆ.
ನೂರಾರು ಜನರ ಮೈಗೆ ಬೆಂಕಿಹೊತ್ತಿಕೊಂಡಿದ್ದು, ಅವರೆಲ್ಲ ಜೀವ ಉಳಿಸಿಕೊಳ್ಳಲು ಹರಸಾಹಸಪಡುತ್ತಿದ್ದ ದೃಶ್ಯ ಬೀದಿಗಳಲ್ಲಿ ಕಂಡುಬಂದಿತ್ತು ಎಂದು ಪ್ರತ್ಯಕ್ಷದರ್ಶಿ ಚಾರ್ಲ್ಸ್ ಕಾಮೂ ವಿವರಿಸಿದ್ದಾರೆ. ಜನರು ಗಾಯಾಳುಗಳನ್ನು ರಕ್ಷಿಸಲು ಟ್ಯಾಂಕರ್ ಸುತ್ತ ಮುತ್ತಿಕೊಂಡ ಪರಿಣಾಮ ರಸ್ತೆಗಳಲ್ಲಿನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.
ನೈರೋಬಿಯಿಂದ 170ಕಿ.ಮೀ.ದೂರದಲ್ಲಿ ಟ್ಯಾಂಕರ್‌ಗೆ ಬೆಂಕಿ ಹೊತ್ತಿಕೊಂಡಿತ್ತು. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಕೆಲವು ಮಂದಿ ಸಿಗರೇಟ್ ಸೇದಿರುವುದೇ ಪೆಟ್ರೋಲ್ ಟ್ಯಾಂಕರ್ ಸ್ಫೋಟಕ್ಕೆ ಕಾರಣ ಎಂದು ಕೀನ್ಯಾ ಪ್ರಧಾನಿ ರೈಲಾ ಓಡಿಂಗಾ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಹೇಳಿದ್ದಾರೆ. |