ನಾಗರಿಕರನ್ನು ಬಿಡುಗಡೆಗೊಳಿಸಲು ನೀಡಲಾದ 48ಗಂಟೆಗಳ ಗಡುವು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಆರಂಭಿಸಿರುವ ಶ್ರೀಲಂಕಾ ಸೇನೆ ಎಲ್‌ಟಿಟಿಇ ಆತ್ಮಹತ್ಯಾ ದಾಳಿ ಘಟಕವಾದ ಬ್ಲಾಕ್ ಟೈಗರ್ಸ್ ಎರಡು ಶಿಬಿರಗಳನ್ನು ವಶಪಡಿಸಿಕೊಂಡಿದೆ. ಈ ಸಂದರ್ಭದಲ್ಲಿ ಸುಮಾರು 12ತಮಿಳು ಉಗ್ರರು ಸಾವನ್ನಪ್ಪಿದ್ದಾರೆ.
ಸೇನೆಯ 58ನೇ ವಿಭಾಗದ ಯೋಧರು ಕಳೆದ ರಾತ್ರಿ ವಿಸುಮಾಡು ಸಮೀಪ ಇದ್ದ ಬ್ಲಾಕ್ ಟೈಗರ್ಸ್‌ಗಳ ಎರಡು ಶಿಬಿರಗಳನ್ನು ವಶಪಡಿಸಿಕೊಂಡಿದೆ. ಈ ವೇಳೆ ಭಾರೀ ಪ್ರಮಾಣದಲ್ಲಿ ಉಗ್ರರಿಗೆ ಹಾನಿ ಮಾಡಲಾಗಿದೆ ಎಂದು ರಾಷ್ಟ್ರೀಯ ಭದ್ರತಾ ಸಂಸ್ಥೆಯ ಮಾಧ್ಯಮ ಕೇಂದ್ರ ವಿವರಿಸಿದೆ.
ಯುದ್ದಪೀಡಿತ ಪ್ರದೇಶದಲ್ಲಿ ಹಿಡಿದಿಟ್ಟುಕೊಳ್ಳಲಾಗಿರುವ ನಾಗರಿಕರನ್ನು ಬಿಡುವಂತೆ ಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ತಮಿಳು ಉಗ್ರರಿಗೆ 48ಗಂಟೆ ಗಡುವು ನೀಡಿದ್ದರು. ಆದರೆ, ಈ ಗಡುವು ಪೊರೈಸಲು ಉಗ್ರರು ವಿಫಲವಾದ ಹಿನ್ನೆಲೆಯಲ್ಲಿ ಸೇನೆ ಕಾರ್ಯಾಚರಣೆ ನಡೆಸಿದೆ. |