ಪಾಕಿಸ್ತಾನದ ತಾಲಿಬಾನ್ ಉಗ್ರರ ಭಧ್ರಕೋಟೆಯಾದ ಸ್ವಾಟ್ ಕಣಿವೆಯಲ್ಲಿ ಸೇನಾಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ 16 ತಾಲಿಬಾನ್ ಉಗ್ರರು ಸೇರಿದಂತೆ 45 ಮಂದಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಾಲಿಬಾನ್ ಉಗ್ರರನ್ನು ನಿಯಂತ್ರಣದಲ್ಲಿಡಲು ಸರಕಾರ ವಿಫಲವಾಗಿದೆ ಎಂದು ಆರೋಪಿಸಿ ಸ್ವಾಟ್ ಪ್ರಾಂತ್ಯದ ಸಂಪುಟ ಸಚಿವರೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದಾರೆ ಎನ್ನಲಾಗಿದೆ.
ಕಳೆದ ವಾರ ಸ್ಟಾಟ್ ಕಣಿವೆಯಲ್ಲಿ ಸ್ಥಳೀಯ ತಾಲಿಬಾನ್ ಉಗ್ರರನ್ನು ಸದೆಬಡೆಯಲು ಆರ್ಟಿಲ್ಲರಿ, ಹೆಲಿಕಾಪ್ಟರ್ ಬೆಂಬಲಿತ ಸೇನಾಪಡೆಗಳು ಕಾರ್ಯಚರಣೆ ನಡೆಸುತ್ತಿವೆ ಎಂದು ಸೇನಾಪಡೆಗಳ ವಕ್ತಾರರು ತಿಳಿಸಿದ್ದಾರೆ.
ಸ್ವಾಟ್ ಕಣಿವೆಯ ಉಪಜಿಲ್ಲೆಯಾದ ಚಾರ್‌ಬಾಘ್‌ನಲ್ಲಿ ತಾಲಿಬಾನ್ ಉಗ್ರರ ಬಲಿಷ್ಟ ತಾಣವಾಗಿದ್ದು, ಉಗ್ರರ ಅಡಗುತಾಣಗಳ ಮೇಲೆ ಸೇನಾಪಡೆಗಳು ದಾಳಿ ನಡೆಸುತ್ತಿವೆ ಎಂದು ಸೇನಾ ವಕ್ತಾರರು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. |