ಮಾಜಿ ಪ್ರಧಾನಿ ಬೇನಜಿರ್ ಭುಟ್ಟೋ ಹತ್ಯೆ ಪ್ರಕರಣವನ್ನು ವಿಶ್ವಸಂಸ್ಥೆ ತನಿಖೆ ನಡೆಸಬೇಕು ಎನ್ನುವ ಮನವಿಯ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅವರೊಂದಿಗೆ ಪ್ರಸಕ್ತ ವಾರದಲ್ಲಿ ಚರ್ಚಿಸಲಾಗುವುದು ಎಂದು ಪ್ರದಾನಿ ಗಿಲಾನಿ ಹೇಳಿದ್ದಾರೆ.
ದೇಶಿಯ ತನಿಖಾ ಸಂಸ್ಥೆಗಳು ತನಿಖೆಯಲ್ಲಿ ಭಾಗಿಯಾಗುವುದರಿಂದ ಪೂರ್ವಾಗ್ರಹಪೀಡಿತ ಹಾಗೂ ರಾಜಕೀಯ ಪೀಡಿತ ಎನ್ನಪ ಆರೋಪಗಳು ಎದುರಾಗುವ ಸಾಧ್ಯತೆಗಳಿರುವುದರಿಂದ ತನಿಖೆಯನ್ನು ವಿಶ್ವಸಂಸ್ಥೆಗೆ ವಹಿಸಲು ನಿರ್ಧರಿಸಲಾಗಿದೆ ಎಂದು ಗಿಲಾನಿ ತಿಳಿಸಿದ್ದಾರೆ.
ಕಳೆದ 2007ರ ಡಿಸೆಂಬರ್ 27 ರಂದು ಭುಟ್ಟೋ ಚುನಾವಾಣಾ ಪ್ರಚಾರದಲ್ಲಿರುವಾಗ ಗುಂಡಿನ ದಾಳಿ ಮತ್ತು ಆತ್ಮಹತ್ಯಾ ಬಾಂಬರ್ ದಾಳಿಗೆ ಬಲಿಯಾದ ನಂತರ ತನಿಖೆಗಾಗಿ ಆಯೋಗವನ್ನು ರಚಿಸುವಂತೆ ವಿಶ್ವಸಂಸ್ಥೆಗೆ ಪಾಕ್ ಮನವಿ ಮಾಡಿತ್ತು.
ಭುಟ್ಟೋ ಹತ್ಯೆಯಲ್ಲಿ ತಾಲಿಬಾನ್ ಮುಖಂಡ ಬೈತುಲ್ಲಾ ಮಸೂದ್ ಕೈವಾಡವಿದೆ ಎಂದು ಪಾಕ್ ಸರಕಾರ ಆರೋಪಿಸಿತ್ತು. ಆದರೆ ಸರಕಾರದ ಆರೋಪಗಳನ್ನು ತಾಲಿಬಾನ್ ಮುಖಂಡ ಮಸೂದ್ ತಳ್ಳಿಹಾಕಿದ್ದರು ಎನ್ನಲಾಗಿದೆ. |