ಪೆಟ್ರೋಲ್ ಟ್ಯಾಂಕರ್‌ವೊಂದು ನಿಯಂತ್ರಣ ತಪ್ಪಿ ಉರುಳಿ ಬಿದ್ದಿದ್ದರಿಂದ ಪೆಟ್ರೋಲ್ ಪಡೆಯಲು ಜನರು ಧಾವಿಸಿದಾಗ ಟ್ಯಾಂಕರ್ ಸ್ಫೋಟಗೊಂಡು ಕನಿಷ್ಟ 111 ಮಂದಿ ಸಾವನ್ನಪ್ಪಿ 200 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಮಕ್ಕಳು ಸೇರಿದಂತೆ ನೂರಾರು ಮಂದಿಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಗಿದ್ದು,ಸುಟ್ಟ ಗಾಯಗಳಿಂದಾಗಿ ಹಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ರಾಜಧಾನಿ ನೈರೋಬಿಯಿಂದ ಮೊಲೊ ನಗರ ಸುಮಾರು 170 ಕಿ.ಮಿ.ಗಳಾಗಿದ್ದು,ಟ್ಯಾಂಕರ್ ಸ್ಫೋಟದಿಂದಾಗಿ ಅನೇಕ ಕಾರುಗಳು ಭಸ್ಮವಾಗಿ ಹೋಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೀನ್ಯಾ ಪ್ರಧಾನಿ ರೈಲಾ ಒಡಿಂಗಾ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ಥಳದಲ್ಲಿ ಕೆಲ ವ್ಯಕ್ತಿಗಳು ಪೆಟ್ರೋಲ್ ತೈಲದ ಮೇಲೆ ಸಿಗರೇಟು ಎಸೆದಿದ್ದರಿಂದ ಸ್ಫೋಟ ಸಂಭವಿಸಿರಬಹುದು ಎಂದು ಹೇಳಿದ್ದಾರೆ. |