ವಿದೇಶಿ ರಾಯಭಾರಿಗಳು, ಪಾಶ್ಚಾತ್ಯ ರಾಷ್ಟ್ರಗಳ ಪತ್ರಕರ್ತರು ಮತ್ತು ಅಂತಾರಾಷ್ಟ್ರೀಯ ಪರಿಹಾರ ಸಂಸ್ಥೆಗಳು ತಮಿಳು ಉಗ್ರರನ್ನು ಬೆಂಬಲಿಸಿದಲ್ಲಿ ದೇಶದಿಂದ ಹೊರದಬ್ಬಲಾಗುವುದು ಎಂದು ಸರಕಾರ ಎಚ್ಚರಿಕೆ ನೀಡಿ ಆದೇಶ ಹೊರಡಿಸಿದೆ.
ಸೇನಾಪಡೆಗಳು ಅನೇಕ ಸೈನಿಕರ ಜೀವತೆತ್ತು ,ಅಂತಿಮ ಹಂತದ ಕಾರ್ಯಚರಣೆಯಲ್ಲಿ ತೊಡಗಿರುವ ಸಂದರ್ಭದಲ್ಲಿ ವಿದೇಶಿ ಮಾಧ್ಯಮಗಳು ಉಗ್ರರಿಗೆ ಬೆಂಬಲಿಸಿ ಹೇಳಿಕೆ ನೀಡುವ ಪ್ರಯತ್ನ ಮಾಡಿದಲ್ಲಿ ಅವರನ್ನು ದೇಶದಿಂದ ಹೊರದಬ್ಬಲಾಗುವುದು ಎಂದು ರಕ್ಷಣಾ ಕಾರ್ಯದರ್ಶಿ ಗೋಟಾಬಾಯ್ ರಾಜಾಪಕ್ಸೆ ಹೇಳಿದ್ದಾರೆ.
ಸೇನಾಪಡೆಗಳ ಮತ್ತು ಉಗ್ರರ ವಿರುದ್ಧದ ಘರ್ಷಣೆಯಲ್ಲಿ ನಾಗರಿಕರಿಗೆ ಸರಕಾರ ಸೂಕ್ತ ಪರಿಹಾರ ಒದಗಿಸುತ್ತಿಲ್ಲ ಎಂದು ವಿದೇಶಿ ಮಾಧ್ಯಮಗಳು ಸರಕಾರವನ್ನು ಆರೋಪಿಸಿ ಪ್ರಕಟಿಸಿದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯದರ್ಶಿ ರಾಜಪಕ್ಸೆ ಹೇಳಿಕೆ ಹೊರಬಿದ್ದಿದೆ.
ಅಂತಾರಾಷ್ಟ್ರೀಯ ಮಾಧ್ಯಮಗಳಾದ ಸಿಎನ್‌ಎನ್, ಅಲ್-ಜಜೀರಾ ಮತ್ತು ವಿಶೇಷವಾಗಿ ಬಿಬಿಸಿ ಟಿ.ವಿ. ಚಾನೆಲ್‌ಗಳು ಎಲ್‌ಟಿಟಿಇ ಪರವಾಗಿರುವ ವೆಬ್‌ಸೈಟ್ ಮೂಲದ ವಿಡೀಯೋ ಕ್ಲಿಪ್‌ಗಳನ್ನು ಪ್ರಕಟಿಸಿ ನಾಗರಿಕರಲ್ಲಿ ಉದ್ರೇಕದ ವಾತಾವರಣ ನಿರ್ಮಿಸುತ್ತಿವೆ ಎಂದು ರಕ್ಷಣಾ ಕಾರ್ಯದರ್ಶಿ ರಾಜಪಕ್ಸೆ ಕಿಡಿ ಕಾರಿದ್ದಾರೆ. |