ವಲಸೆ, ಹೆಚ್ಚಾಗುತ್ತಿರುವ ಜನನ ಪ್ರಮಾಣ ಮತ್ತು ಮತಾಂತರ - ಈ ಕಾರಣಗಳಿಂದಾಗಿ ಇಂಗ್ಲೆಂಡ್‌ನಲ್ಲಿ 5 ಲಕ್ಷ ಇದ್ದ ಮುಸಲ್ಮಾನರ ಜನಸಂಖ್ಯೆಯು ಕೇವಲ ನಾಲ್ಕು ವರ್ಷಗಳಲ್ಲಿ 24 ಲಕ್ಷಕ್ಕೇರಿದೆ.
ಯುದ್ಧ ಮತ್ತು ಭಯೋತ್ಪಾದನೆ ಕುರಿತಾಗಿ ಪಾಶ್ಚಾತ್ಯರ ಪ್ರತಿಕ್ರಿಯೆಯಿಂದಾಗಿ, ತಮ್ಮನ್ನು ಮುಸ್ಲಿಮರೆಂದು ಕರೆಸಿಕೊಳ್ಳಲು ಬಯಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಕೂಡ ಇದಕ್ಕೆ ಕಾರಣಗಳಲ್ಲೊಂದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
2004-2008 ಅವಧಿಯಲ್ಲಿ ಇಂಗ್ಲೆಂಡಿನ ರಾಷ್ಟ್ರೀಯ ಅಂಕಿಅಂಶಗಳ ಕಾರ್ಯಾಲಯವು ನಡೆಸಿದ ಸಂಶೋಧನೆಯ ಅನುಸಾರ, ಸಮಾಜದ ಇತರ ವರ್ಗಗಳಿಗಿಂತ ಮುಸ್ಲಿಂ ಜನಸಂಖ್ಯೆಯು ಹತ್ತು ಪಟ್ಟು ಹೆಚ್ಚು ವೇಗದಲ್ಲಿ ಏರಿಕೆ ಕಂಡಿದೆ. ಇದೇ ಅವಧಿಯಲ್ಲಿ ಕ್ರಿಶ್ಚಿಯನ್ ಜನಸಂಖ್ಯೆಯು 20 ಲಕ್ಷಕ್ಕಿಂತಲೂ ಹೆಚ್ಚು ಕುಸಿತ ಕಂಡಿದೆ.
ರಾಷ್ಟ್ರೀಯ ಅಂಕಿಅಂಶಗಳ ಕಾರ್ಯಾಲಯ ಪ್ರಕಾರ, ಇಂಗ್ಲೆಂಡಿನಲ್ಲಿರುವ ಕ್ರಿಶ್ಚಿಯನ್ನರ ಸಂಖ್ಯೆ 4.26 ಕೋಟಿ.
ಈ ಮಧ್ಯೆ, ಭವಿಷ್ಯದಲ್ಲಿ ಮುಸ್ಲಿಮರು ಪ್ರಾಬಲ್ಯ ಹೊಂದುವುದನ್ನು ಸಮಾಜದ ಇತರ ವರ್ಗಕ್ಕೆ ಬೆದರಿಕೆ ಎಂದು ಪರಿಗಣಿಸಬಾರದಾಗಿ ಬ್ರಿಟನ್‌ನ ಮುಸ್ಲಿಂ ಮಂಡಳಿಯ ಮಹಾ ಕಾರ್ಯದರ್ಶಿ ಮಹಮ್ಮದ್ ಅಬ್ದುಲ್ ಬಾರಿ ಪ್ರತಿಕ್ರಿಯಿಸಿದ್ದಾರೆ. |