ಬ್ರಿಟನ್ : ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಮೇಲೆ ಶೂ ಎಸೆದ ಪ್ರಕರಣದ ನಂತರ ಸರದಿ ಚೀನಾದ ಪ್ರಧಾನಿಯದಾಗಿದೆ. ಚೀನಾದ ಪ್ರಧಾನಿ ವೆನ್ ಜಿಬಾವೊ, ಬ್ರಿಟನ್‌ನ ಕೆಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡುತ್ತಿರುವ ಸಂದರ್ಭದಲ್ಲಿ ಪ್ರತಿಭಟನಾಕಾರನೊಬ್ಬ ಶೂ ಎಸೆದ ನಂತರ ಇದೊಂದು ಹಗರಣವೆಂದು ಕಿರುಚಾಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಯುರೋಪ್‌ನ ಐದು ದಿನಗಳ ಪ್ರವಾಸದ ಸಂದರ್ಭದಲ್ಲಿ ಕೊನೆಯ ದಿನದಂದು ಕೆಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡುತ್ತಿರುವಾಗ ಶೂ ಎಸೆದ ಪ್ರಕರಣ ಸಂಭವಿಸಿದ್ದು, ಆರೋಪಿಯನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟೀ ಶರ್ಟ್ ಧರಿಸಿ ಪಾಶ್ಚಾತ್ಯ ರಾಷ್ಟ್ರಗಳ ನಾಗರಿಕನಂತೆ ಕಂಡುಬಂದ ವ್ಯಕ್ತಿಯೊಬ್ಬ ಚೀನಾದ ಪ್ರಧಾನಿಯೊಬ್ಬ ಸರ್ವಾಧಿಕಾರಿ.ಇತನ ಸುಳ್ಳು ಭಾಷಣವನ್ನು ಹೇಗೆ ಕೇಳುತ್ತಿದ್ದಿರಿ?. ನೀವು ಏಕೆ ಸವಾಲುಗಳನ್ನು ಎಸೆಯುತ್ತಿಲ್ಲ ಎಂದು ಗಟ್ಟಿ ಸ್ವರದಲ್ಲಿ ಕೂಗಿದನು ಎಂದು ಮಾಧ್ಯಮಗಳು ವರದಿ ಮಾಡಿವೆ.
ಸಭಾಂಗಣದ ವೇದಿಕೆಯ ಮೇಲೆ ಚೀನಾದ ಪ್ರಧಾನಿ ಭಾಷಣ ಮಾಡುತ್ತಿರುವ ಸಂದರ್ಭದಲ್ಲಿ ಪ್ರತಿಭಟನಾಕಾರನು ಎಸೆದ ಶೂ ,ಪ್ರಧಾನಿಯವರು ನಿಂತ ಸ್ಥಳಕ್ಕಿಂತ ಸ್ವಲ್ಪ ದೂರದಲ್ಲಿ ಬಿದ್ದಾಗ ಭಧ್ರತಾ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಭಟನಾಕಾರನು ಸಭಾಂಗಣದಲ್ಲಿದ್ದ ಪ್ರೇಕ್ಷಕರನ್ನು ಉದ್ದೇಶಿಸಿ, ಎದ್ದು ನಿಲ್ಲಿ ಪ್ರತಿಭಟಸಿ, ನಿಮಗೆ ನಾಚಿಕೆ ಬರಲಿ ಜೋರಾಗಿ ಕೂಗಿದನು ಎಂದು ಮೂಲಗಳು ತಿಳಿಸಿವೆ. |