ನಗರದ ಫಾಗಿ ಬಾಟಮ್ ಸಭಾಂಗಣದಲ್ಲಿ ಅಮೆರಿಕದ ಉಪಾಧ್ಯಕ್ಷ ಜೊಯಿ ಬಿಡೆನ್ ಅವರಿಂದ ಅಮೆರಿಕದ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿಯಾಗಿ ಹಿಲೆರಿ ಕ್ಲಿಂಟನ್ ಮತ್ತೊಮ್ಮೆ ಸಾರ್ವಜನಿಕರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು ಎಂದು ಮೂಲಗಳು ತಿಳಿಸಿವೆ.
ಸಭಾಂಗಣದಲ್ಲಿ ಹಿಲೆರಿಯವರ ಪತಿ ಮಾಜಿ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ಮಗಳು ಚೆಲ್ಸಿಯಾ ಸೇರಿದಂತೆ ಮಾಜಿ ವಿದೇಶಾಂಗ ಕಾರ್ಯದರ್ಶಿಗಳು ಗಣ್ಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರೆಂದು ಮಾಧ್ಯಮಗಳು ವರದಿ ಮಾಡಿವೆ.
ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಅವರ ಅಡಳಿತದಲ್ಲಿದ್ದ ಕಾಂಡೋಲೀಜಾ ರೈಸ್ ಅವರ ಸ್ಥಾನವನ್ನು ಹಿಲೆರಿ ಕ್ಲಿಂಟನ್ ತುಂಬಲಿದ್ದಾರೆ. ಸಮಾರಂಭದಲ್ಲಿ ಮಾತನಾಡಿದ ಅಮೆರಿಕ ಉಪಾಧ್ಯಕ್ಷ ಬಿಡೆನ್, ಹೆಲೆರಿ ಕ್ಲಿಂಟನ್ ಒಬಾಮಾ ಅಡಳಿತಕ್ಕೆ ಸವಾಲಾಗಿರುವ ವಿದೇಶಿ ನೀತಿಗಳ ಸವಾಲನ್ನು ಪರಿಪೂರ್ಣವಾಗಿ ನಿಭಾಯಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
|