ಪೊಲೀಸ್ ಸಮವಸ್ತ್ರ ಧರಿಸಿದ್ದ ಆತ್ಮಹತ್ಯಾ ಬಾಂಬರ್ ವ್ಯಕ್ತಿಯೊಬ್ಬ ಪೊಲೀಸ್ ತರಬೇತಿ ಶಿಬಿರವನ್ನು ಪ್ರವೇಶಿಸಿ ತನ್ನನ್ನು ತಾನು ಸ್ಫೋಟಿಸಿಕೊಂಡ ಹಿನ್ನೆಲೆಯಲ್ಲಿ 21 ಮಂದಿ ಪೊಲೀಸ್ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಉರುಜ್‌ಗಾನ್ ಪ್ರಾಂತ್ಯದಲ್ಲಿರುವ ಟಿರಿನ್‌ಕೋಟ್‌ನ ತರಬೇತಿ ಶಿಬಿರದಲ್ಲಿ ಪೊಲೀಸರು ಅಭ್ಯಾಸ ನಡೆಸುತ್ತಿರುವಾಗ ಬಾಂಬರ್ ಶಿಬಿರವನ್ನು ಪ್ರವೇಶಿಸಿ ತನ್ನನ್ನು ತಾನು ಸ್ಫೋಟಿಸಿಕೊಂಡನು ಎಂದು ಪೊಲೀಸ್ ಮುಖ್ಯಸ್ಥ ಜುಮಾ ಗುಲ್ ಹಿಮತ್ ಹೇಳಿದ್ದಾರೆ.
ತಾಲಿಬಾನ್‌ಗಳು ಭೀಕರ ದಾಳಿಗಳನ್ನು ನಡೆಸುವ ಸಂದರ್ಭದಲ್ಲಿ ಪೊಲೀಸ್ ಸಮವಸ್ತ್ರಗಳನ್ನು ಧರಿಸುತ್ತಾರೆ ಎಂದು ಆಂತರಿಕ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಸ್ಥಳದಲ್ಲಿಯೇ 21 ಮಂದಿ ಪೊಲೀಸರು ಸಾವನ್ನಪ್ಪಿದ್ದು, ಕನಿಷ್ಟ 20 ಮಂದಿ ಭೀಕರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸ್ ಮುಖ್ಯಸ್ಥ ಜುಮಾ ಗುಲ್ ತಿಳಿಸಿದ್ದಾರೆ. |