ವಾಷಿಂಗ್ಟನ್ : ಸಾರ್ವಜನಿಕರ ಸುರಕ್ಷತೆಗೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಶ್ರೀಲಂಕಾ ಸರಕಾರಕ್ಕೆ ಹಾಗೂ ತಮಿಳು ಉಗ್ರರಿಗೆ ಅಮೆರಿಕದ ಇಬ್ಬರು ಹಿರಿಯ ಸಂಸದರು ಜಂಟಿಯಾಗಿ ಒತ್ತಾಯಿಸಿದ್ದಾರೆ.
ಅಮೆರಿಕ ಸಂಸತ್ತಿನ ವಿದೇಶಾಂಗ ವ್ಯವಹಾರಗಳ ಸಮಿತಿಯ ಮುಖ್ಯಸ್ಥ ಡೆಮಾಕ್ರೆಟಿಕ್ ಸದಸ್ಯ ಜಾನ್ ಕೆರ್ರಿ ಮತ್ತು ರಿಪಬ್ಲಿಕನ್ ಸಂಸತ್ ಸದಸ್ಯ ರಿಚರ್ಡ್ ಲೂಗಾರ್ ಶ್ರೀಲಂಕಾದಲ್ಲಿ ನಾಗರಿಕರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಶ್ರೀಲಂಕಾ ಸರಕಾರಕ್ಕೆ ಪತ್ರ ಬರೆದಿದ್ದಾರೆ.
ಶ್ರೀಲಂಕಾದಲ್ಲಿರುವ ನಾಗರಿಕರ ಸುರಕ್ಷತೆಗಾಗಿ ಶೀಘ್ರವಾಗಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಶ್ರೀಲಂಕಾ ಸರಕಾರಕ್ಕೆ ಮತ್ತು ತಮಿಳು ಉಗ್ರರಿಗೆ ಜಂಟಿಯಾಗಿ ಒತ್ತಾಯಿಸಿದ್ದಾರೆ. ತಮಿಳು ಉಗ್ರರಿಗೆ ಬೆಂಬಲಿಸಿದಲ್ಲಿ ವಿದೇಶಿ ರಾಯಭಾರಿಗಳನ್ನು, ಪತ್ರಕರ್ತರನ್ನು ಮಾಧ್ಯಮದವರನ್ನು ದೇಶದಿಂದ ಹೊರದಬ್ಬುವುದಾಗಿ ರಕ್ಷಣಾ ಕಾರ್ಯದರ್ಶಿ ರಾಜಪಕ್ಸೆ ಇತ್ತೀಚೆಗೆ ಹೇಳಿಕೆ ನೀಡಿರುವುದು, ಶ್ರೀಲಂಕಾ ನಾಗರಿಕರ ಸುರಕ್ಷತೆಯ ಬಗ್ಗೆ ಕಳವಳವಾಗಿದೆ ಎಂದು ಅಮೆರಿಕ ಸಂಸದರಾದ ಕೆರ್ರಿ ಮತ್ತು ಲೂಗಾರ್ ಆತಂಕ ವ್ಯಕ್ತಪಡಿಸಿದ್ದಾರೆ. |