ಮೂವರು ಅಪರಿಚಿತ ಮಹಿಳೆಯರು ಒಬ್ಬ ವ್ಯಕ್ತಿಯನ್ನು ಅಪಹರಿಸಿ, ಸತತ ನಾಲ್ಕು ದಿನಗಳ ಕಾಲ ಅತ್ಯಾಚಾರವೆಸಗಿ ನಂತರ ಖಯ್ಯೂಮಾಬಾದ್ ನದಿ ದಂಡೆಯ ಮೇಲೆ ಆತನನ್ನು ಪ್ರಜ್ಞಾಹೀನ ಸ್ಥಿತಿಯಲ್ಲೇ ಎಸೆದು ಹೋಗಿರುವ ಘಟನೆ ವರದಿಯಾಗಿದ್ದು, ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅತ್ಯಾಚಾರಕ್ಕೀಡಾದ ವ್ಯಕ್ತಿ ಖಲೀಲ್ ರೆಸ್ಟುರಾಂಟ್‌ನಲ್ಲಿ ವೇಟರ್ ಕೆಲಸ ಮಾಡುತ್ತಿದ್ದು, ಜನವರಿ 27 ರಂದು ರಾತ್ರಿ ರೆಸ್ಟುರಾಂಟ್‌ಗೆ ಆಗಮಿಸಿದ ಅಪರಿಚಿತನೊಬ್ಬ, ರೆಸ್ಟುರಾಂಟ್‌ನ ಹೊರಗಡೆ ಕಾರಿನಲ್ಲಿ ಕುಳಿತಿರುವ ಮಹಿಳೆಯರಿಗೆ ಉಪಹಾರವನ್ನು ಸರಬರಾಜು ಮಾಡುವಂತೆ ಖಲೀಲ್‌ಗೆ ಆದೇಶಿಸಿ ಕಾರಿನತ್ತ ತೆರಳಿದ್ದ ಎನ್ನಲಾಗಿದೆ.
ಕಾರಿನಲ್ಲಿದ್ದ ಮಹಿಳೆ ಇತ್ತೀಚೆಗಷ್ಟೆ ಈ ಪ್ರದೇಶಕ್ಕೆ ಬಂದು ನೆಲೆಸಿದ್ದು, ಪ್ರತಿದಿನ ಉಪಹಾರವನ್ನು ಮನೆಗೆ ಸರಬರಾಜು ಮಾಡುವಂತೆ ತಿಳಿಸಿ ,ನಮ್ಮ ಜೊತೆ ಕಾರಿನಲ್ಲಿ ಬಂದಲ್ಲಿ ಮನೆಯನ್ನು ತೋರಿಸುತ್ತೇವೆ ಎಂದಿದ್ದರು. ಮನೆಯನ್ನು ತಲುಪಿದ ನಂತರ ಹಾಲಿನಲ್ಲಿ ಮಾದಕ ವಸ್ತುವನ್ನು ಬೆರಿಸಿ ಹಾಲು ಕುಡಿಯಲು ನೀಡಿದಾಗ ನಾನು ಪ್ರಜ್ಞಾಹೀನನಾದೆ ಎಂದು ಡೈಲಿ ಟೈಮ್ಸ್‌ಗೆ ಖಲೀಲ್ ಮಾಹಿತಿ ನೀಡಿದ್ದಾರೆ.
ಪ್ರಜ್ಞೆ ಮರುಕಳಿಸಿದ ನಂತರ ನೋಡಿದಾಗ ಮೂವರು ಮಹಿಳೆಯರು ನನಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿದರು. ಸತತ ನಾಲ್ಕು ದಿನಗಳ ಲೈಂಗಿಕ ಹಿಂಸೆ ನೀಡಿದ ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿ ಖಯ್ಯೂಮಾಬಾದ್ ನದಿ ದಂಡೆಯ ಮೇಲೆ ಎಸೆದು ಹೋಗಿರುವುದಾಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾನೆ. ಮರ್ಮಾಂಗದಲ್ಲಿ ತೀವ್ರ ರಕ್ತಸ್ರಾವವಾದ ಪರಿಣಾಮ ಖಲೀಲ್ ದೇಹಸ್ಥಿತಿ ತುಂಬಾ ಹದಗೆಟ್ಟಿದ್ದು, ಆತ ನಡೆದಾಡಲು ಕೂಡಾ ತೊಂದರೆ ಅನುಭವಿಸುತ್ತಿದ್ದಾನೆ ಎಂದು ಪೊಲೀಸ್ ಮುಖ್ಯಸ್ಥ ಅಸದ್ ರಝಾ ತಿಳಿಸಿದ್ದಾರೆ.
ಕರಾಚಿಯ ಕ್ಲಿಫ್ಟನ್ ಪ್ರದೇಶದಲ್ಲಿ ವಾಸವಾಗಿರುವ ಮೂವರು ಮಹಿಳೆಯರು ಶ್ರೀಮಂತ ಕುಟುಂಬಗಳಿಗೆ ಸೇರಿದವರಾಗಿದ್ದು,ಅತ್ಯಾಚಾರ ಪ್ರಕರಣ ಗಂಭೀರವಾಗಿದೆ. ಆದರೆ ಶೀಘ್ರದಲ್ಲಿ ಬಗೆಹರಿಯುವ ವಿಶ್ವಾಸವಿದೆ ಎಂದು ಪೊಲೀಸ್ ಮುಖ್ಯಸ್ಥ ಅಸದ್ ರಜಾ ತಿಳಿಸಿದ್ದಾರೆ. |