ಉತ್ತರ ಶ್ರೀಲಂಕಾದಲ್ಲಿ ಸೇನಾಪಡೆಗಳು ನೆಲಮಹಡಿಯಲ್ಲಿರುವ ಬಂಕರ್‌ನ್ನು ಪತ್ತೆ ಮಾಡಿದ್ದು, ತಮಿಳು ಉಗ್ರರ ಮುಖ್ಯಸ್ಥ ಪ್ರಭಾಕರನ್ ಅಡಗುತಾಣವಾಗಿರಬಹುದು ಎಂದು ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ನೆಲದಾಳದಲ್ಲಿ ಎರಡಂತಸ್ತಿನ ಕಟ್ಟಡವಿದ್ದು, ವಿದ್ಯುತ್ ಜನರೇಟರ್‌ಗಳು ಹವಾನಿಯಂತ್ರಿತ ವ್ಯವಸ್ಥೆ ಮತ್ತು ವೈದ್ಯಕೀಯ ಉಪಕರಣಗಳು ಲಭ್ಯವಾಗಿವೆ ಎಂದು ಸೇನಾಪಡೆಗಳ ವಕ್ತಾರರು ತಿಳಿಸಿದ್ದಾರೆ.
ತಮಿಳು ಉಗ್ರರ ಪ್ರಮುಖ ತಾಣವನ್ನು ಸೇನಾಪಡೆಗಳು ವಶಪಡಿಸಿಕೊಂಡಿದ್ದರೂ ಇಲ್ಲಿಯವರೆಗೆ ಪ್ರಭಾಕರನ್ ಅಡಗುತಾಣವನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ ಎನ್ನಲಾಗಿದೆ.
ತಮಿಳು ಉಗ್ರರ ನಾಯಕ ಪ್ರಭಾಕರನ್ ದೋಣಿಯ ಮುಖಾಂತರ ದೇಶವನ್ನು ಬಿಟ್ಟು ಪರಾರಿಯಾಗಿರಬಹುದು ಎಂದು ಸೇನಾಪಡೆಗಳು ವಕ್ತಾರರು ಶಂಕೆ ವ್ಯಕ್ತಪಡಿಸಿದ್ದಾರೆ. |