ಇತ್ತೀಚೆಗೆ ಪಂಜಾಬ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ನಾಲ್ಕು ನವಜಾತ ಶಿಶುಗಳು ಇನ್‌ಕ್ಯುಬೇಟರ್‌ನಲ್ಲೇ ಜೀವಂತ ದಹನವಾದ ಘಟನೆಯಷ್ಟೇ ಹೃದಯ ವಿದ್ರಾವಕ ಸಾವು ವಾಷಿಂಗ್ ಮೆಶಿನ್ ರೂಪದಲ್ಲಿ 4 ವರ್ಷದ ಮಗುವನ್ನು ಬಲಿತೆಗೆದುಕೊಂಡಿದೆ. ಈ ಬಾಲಕಿ ವಾಶಿಂಗ್ ಮೆಶಿನ್ ಮೇಲೇರಿ ಒಳಗೆ ಇಳಿದ ತಕ್ಷಣವೇ, ಪಕ್ಕದಲ್ಲಿದ್ದ ಸಹೋದರ 'ಸ್ಟಾರ್ಟ್' ಬಟನ್ ಒತ್ತಿದ್ದರಿಂದ ಈ ದುರಂತ ಸಂಭವಿಸಿದೆ.
ಸೋಮವಾರ ಮಧ್ಯಾಹ್ನ ಆಟವಾಡುತ್ತಾ ಫ್ರಂಟ್ ಲೋಡಿಂಗ್ ವಾಶಿಂಗ್ ಮೆಶಿನ್ ಮೇಲೇರಿದ್ದಳು ಕೇಲೀ ಇಶಿ ಎಂಬ ಬಾಲಕಿ. ಜತೆಯಲ್ಲೇ ಆಡುತ್ತಿದ್ದ 15 ತಿಂಗಳ ಪ್ರಾಯದ ಪುಟ್ಟ ಮಗು, ಆಕೆಯ ಸಹೋದರ ಬಹುಶಃ ಸ್ಟಾರ್ಟ್ ಬಟನ್ ಮೇಲೆ ಬಿದ್ದಿರಬೇಕು ಅಥವಾ ಅರಿಯದೆ ಒತ್ತಿರಬೇಕು. ಹೀಗಾಗಿ ಈ ದುರಂತ ಸಂಭವಿಸಿದೆ ಎಂದು ಆರೆಂಜ್ ಕೌಂಟಿ ಶರೀಫರ ವಕ್ತಾರರು ತಿಳಿಸಿದ್ದಾರೆ.
ಮೆಶಿನ್‌ನ ನಿಯಂತ್ರಣ ಬಟನ್‌ಗಳು ನೆಲದಿಂದ ಕೇವಲ 20 ಇಂಚು ಎತ್ತರದಲ್ಲಿದ್ದು, ಸ್ಟಾರ್ಟ್ ಬಟನ್ ಅತ್ಯಂತ ಸುಲಭವಾಗಿ ಒತ್ತಬಹುದಾದ ಗುಂಡಿಯಾಗಿತ್ತು. ಈ ಪುಟ್ಟ ಬಾಲಕಿಯು ಕನಿಷ್ಠ ಎರಡು ನಿಮಿಷಗಳ ಕಾಲ ವಾಷಿಂಗ್ ಮೆಶಿನ್ ಒಳಗೆ ಸುತ್ತಿರಬೇಕು. ನಂತರ ತಾಯಿ ಬಂದು ನೋಡಿದಾಗ ಬಾಲಕಿ ಶವವಾಗಿದ್ದಳು. |