ಕೊಲಾಂಬಿಯಾದ ವಾಯುವ್ಯ ಭಾಗದಲ್ಲಿ ಬಸ್ ಒಂದು ಅವಘಾಡಕ್ಕೀಡಾದ ಪರಿಣಾಮ ಕನಿಷ್ಠ 20 ಮಂದಿ ಸಾವಿಗೀಡಾಗಿದ್ದು, ನಾಲ್ಕು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಚೊಕೊ ಪ್ರಾಂತ್ಯದ ಕಾರ್ಮೆನ್ ದಿ ಅಟ್ರಾಟೊ ಎಂಬಲ್ಲಿ ಈ ದುರಂತ ಘಟನೆಯು ಸಂಭವಿಸಿದೆ. ದುರಂತ ವೇಳೆ 34 ಪ್ರಯಾಣಿಕರು ಬಸ್‌ನಲ್ಲಿ ಇದ್ದರೆಂದು ತಿಳಿದು ಬಂದಿದೆ. |