ನವದೆಹಲಿಯಲ್ಲಿರುವ 'ರಾಜೀವ್ ಗಾಂಧಿ ಪ್ರತಿಷ್ಠಾನ'ದ ಟ್ರಸ್ಟಿಯಾಗಿರುವ ಪ್ರಿಯಾಂಕ ಗಾಂಧಿ ವಡೇರ, ದೇಶದ ಗ್ರಾಮೀಣ ಅಭಿವೃದ್ಧಿ ಯೋಜನೆಗಳ ಅಧ್ಯಯನ ನಡೆಸಲು ವಿಶ್ವದ ದೊಡ್ಡ ಸರ್ಕಾರೇತರ ಸಂಸ್ಥೆ(ಎನ್‌ಜಿಒ)ಗಳಲ್ಲಿ ಒಂದಾದ 'ಬ್ರಾಕ್'ನ ಆಹ್ವಾನದ ಮೇರೆಗೆ ಬಾಂಗ್ಲಾದೇಶಕ್ಕೆ ಬಂದಿದ್ದಾರೆ. ಎರಡು ದಿನದ ಈ ಸಂದರ್ಶನ ವೇಳೆಯಲ್ಲಿ ಪ್ರಿಯಾಂಕ ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾರ ಕುಟುಂಬಕ್ಕೆ ಭೇಟಿಯನ್ನಿತ್ತಿದ್ದಾರೆ. |