ಮುಂಬೈ ಮೇಲೆ ನಡೆದ ಭಯೋತ್ಪಾದನಾ ದಾಳಿಯ ಹಿಂದೆ ದಕ್ಷಿಣ ಏಷ್ಯಾದ ಬಾಂಗ್ಲಾದೇಶಿ ಮುಸ್ಲಿಮ್ ಮೂಲಭೂತವಾದಿ ಸಂಘಟನೆಯ ಕೈವಾಡ ಇರುವ ಕುರಿತು ಪಾಕ್ ತನ್ನ ತನಿಖೆಯಲ್ಲಿ ತಳುಕು ಹಾಕಿರುವ ಸಾಧ್ಯತೆ ಇದೆ ಎಂದು ಮಾಧ್ಯಮಗಳ ವರದಿ ತಿಳಿಸಿದೆ.
ಮುಂಬೈ ದಾಳಿಯ ಹಿಂದೆ ಬಾಂಗ್ಲಾದೇಶದ ಹುಜಿ ಸಂಘಟನೆಯ ಶಾಮೀಲಾತಿ ಇರುವ ಬಗ್ಗೆ ಪಾಕ್ ತನ್ನ ತನಿಖೆಯಲ್ಲಿ ಬಹುತೇಕ ಸೂಚನೆ ನೀಡಿರುವ ಸಾಧ್ಯತೆ ಇರುವುದಾಗಿ ಪಾಕ್ ಮಾಧ್ಯಮಗಳ ವರದಿ ಹೇಳಿದೆ. ದಾಳಿಯಲ್ಲಿ ಅಂತಾರಾಷ್ಟ್ರೀಯ ಮುಸ್ಲಿಮ್ ಮೂಲಭೂತವಾದಿಗಳು ಸಕ್ರೀಯವಾಗಿ ಪಾಲ್ಗೊಂಡಿರುವುದಾಗಿ ಡಾನ್ ಪತ್ರಿಕಾ ವರದಿ ವಿವರಿಸಿದೆ.
ದಾಳಿಯ ಹಿಂದೆ ಬಾಂಗ್ಲಾದೇಶದ ಶಾಮೀಲಾತಿಯನ್ನು ಉಲ್ಲೇಖಿಸಿರುವ ಮಾಧ್ಯಮ ವರದಿ, ಇದರಲ್ಲಿ ಕೇವಲ ನಿಷೇಧಿತ ಉಗ್ರಗಾಮಿ ಸಂಘಟನೆಗಳು ಮಾತ್ರ ಶಾಮಿಲಾಗಿಲ್ಲ, ಅದರಲ್ಲಿ ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮಿ ಆಫ್ ಬಾಂಗ್ಲಾದೇಶಿಯ ಪಾತ್ರವೂ ಇರುವುದಾಗಿ ತಿಳಿಸಿದೆ.
ಇವೆಲ್ಲ ಅಂಶಗಳು ಪಾಕಿಸ್ತಾನ ನಡೆಸಿರುವ ತನಿಖೆಯಲ್ಲಿ ಅಡಕವಾಗಿರುವ ಅಂಶಗಳಾಗಿವೆ ಎಂದಿರುವ ಡಾನ್, ಈ ವಾರದ ಅಂತ್ಯದೊಳಗೆ ಪಾಕಿಸ್ತಾನ ಈ ವರದಿಯನ್ನು ಬಹಿರಂಗಗೊಳಿಸುವ ಸಾಧ್ಯತೆ ಇರುವುದಾಗಿ ಹೇಳಿದೆ. |