ಮುಂಬೈ ಮೇಲೆ ನಡೆದ ಭಯೋತ್ಪಾದನಾ ದಾಳಿ ಸಂಬಂಧ ಪಾಕಿಸ್ತಾನ ಕೈಗೊಂಡಿರುವ ತನಿಖೆಯಲ್ಲಿ ಸಂತೃಪ್ತಿಯನ್ನು ವ್ಯಕ್ತಪಡಿಸಿದ ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿ ಬಾನ್ ಕಿ ಮೂನ್ ದಾಳಿಯ ಹಿಂದಿನ ಉಗ್ರರನ್ನು ಸೆರೆಹಿಡಿಯುವಲ್ಲಿ ಪಾಕ್ ಭಾರತ ದೇಶಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಎಂದಿದ್ದಾರೆ. ಭಯೋತ್ಪಾದಕರ ವಿರುದ್ಧದ ಪಾಕಿಸ್ತಾನದ ಹೋರಾಟ ಶ್ಲಾಘನೀಯವೆಂದ ಬಾನ್ ಜಮ್ಮು-ಕಾಶ್ಮೀರ ವಿವಾದವು ದಕ್ಷಿಣ ಏಷಿಯಾದಲ್ಲಿನ ಅತ್ಯಂತ ದೊಡ್ಡ ಸಮಸ್ಯೆಯಾಗಿದೆ ಎಂದರು.
|