ಅಪಘಾನಿಸ್ತಾನದಲ್ಲಿ ನೆಲೆ ನಿಂತಿರುವ ತಾಲಿಬಾನ್ ಉಗ್ರರಲ್ಲಿ ಶೇಕಡಾ 60ರಷ್ಟು ಮಂದಿ ವಿದೇಶಿಗಳಾಗಿದ್ದಾರೆ ಎಂದು ಅಫ್ಘಾನ್ ರಕ್ಷಣಾ ಸಚಿವ ಜನರಲ್ ಅಬ್ದುಲ್ ರಹೀಮ್ ವಾರ್ದಕ್ ಗುರುವಾರ ತಿಳಿಸಿದ್ದಾರೆ. ಸುಮಾರು 15 ಸಾವಿರ ತಾಲಿಬಾನ್ ಉಗ್ರರು ಅಪ್ಘಾನ್‌ನಲ್ಲಿ ಭಯೋತ್ಪಾದನೆಗೆ ಪ್ರೋತ್ಸಾಹಿಸುತ್ತಿದ್ದು, ಹೆಲ್ಮಾಂಡ್ ಪ್ರಾಂತ್ಯವು ಇವರ ಶಕ್ತಿ ಕೇಂದ್ರವಾಗಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ವಿದೇಶಿ ಉಗ್ರರ ರಾಷ್ಟ್ರೀಯತೆ ಬಗ್ಗೆ ಯಾವುದೇ ವಿವರಗಳನ್ನು ನೀಡಿಲ್ಲ. |