ದ್ವೀಪ ಪ್ರದೇಶದ ಉತ್ತರ ಭಾಗದಲ್ಲಿನ ತಮಿಳು ಬಂಡುಕೋರರ ಕೊನೆಯ ನೌಕ ನೆಲೆಯ ಕೇಂದ್ರವನ್ನು ಗುರುವಾರ ಶ್ರೀಲಂಕಾ ಸೇನೆ ವಶಪಡಿಸಿಕೊಂಡಿರುವುದಾಗಿ ಮಿಲಿಟರಿ ಮೂಲಗಳು ತಿಳಿಸಿವೆ.
ಪ್ರತ್ಯೇಕ ತಮಿಳು ರಾಜ್ಯ ಹೋರಾಟ ನಡೆಸುತ್ತಿರುವ ಲಿಬರೇಷನ್ ಟೈಗರ್ಸ್ ಆಫ್ ತಮಿಳು ಇಳಂನ ವಿರುದ್ದ ಲಂಕಾ ಸೇನೆ ತೀವ್ರ ಕಾರ್ಯಾಚರಣೆ ನಡೆಸುವ ಮೂಲಕ ಪ್ರಮುಖ ನೆಲೆಗಳನ್ನು ಈಗಾಗಲೇ ವಶಪಡಿಸಿಕೊಂಡಿದ್ದು, ಇದೀಗ ಚಾಲೈಯಲ್ಲಿನ ನೌಕಾನೆಲೆಯ ಕೇಂದ್ರವನ್ನೂ ತಮ್ಮ ತೆಕ್ಕೆಗೆ ತೆಗೆದುಕೊಂಡಿರುವುದಾಗಿ ಹೇಳಿದೆ.
ಎಲ್‌ಟಿಟಿಇ ಮತ್ತು ಸೇನಾ ನಡುವಿನ ಘರ್ಷಣೆಯಲ್ಲಿ ಅಂದಾಜು ನಾಲ್ಕು ಮಂದಿ ಸೀ ಟೈಗರ್ಸ್ ಮತ್ತು 8 ಬಂಡುಕೋರರು ಸಾವನ್ನಪ್ಪಿರುವುದಾಗಿ ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀಲಂಕಾ ಪಡೆ ಈಗಾಗಲೇ ಎಲ್‌ಟಿಟಿಇ ಪ್ರಮುಖ ಕಾರಸ್ಥಾನಗಳನ್ನು ವಶಕ್ಕೆ ತೆಗೆದುಕೊಳ್ಳುವ ಮೂಲಕ ಬಂಡುಕೋರರು ಅಂತಿಮ ಹಂತ ತಲುಪಿದ್ದು, ಮುಂದಿನ ಗುರಿ ಸಂಘಟನೆಯ ವರಿಷ್ಠ ಪ್ರಭಾಕರನ್‌ನನ್ನು ಸೆರೆ ಹಿಡಿಯುವುದೇ ಆಗಿದೆ ಎಂದು ವಿವರಿಸಿದೆ. |