ಮೀನುಗಾರಿಕೆಗೆ ತೆರಳಿದ್ದ 50 ಭಾರತೀಯರನ್ನು ಜಲಗಡಿ ದಾಟಿದ ಆರೋಪದ ಮೇಲೆ ಕರಾಚಿ ಬಂದರಿನ ಸಮೀಪ ಪಾಕಿಸ್ತಾನದ ಸಮುದ್ರ ಕಾವಲುಪಡೆ ಬಂಧಿಸಿದ್ದು, ಒಂಬತ್ತು ದೋಣಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಬಂಧಿತರನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪಾಕ್ ಅಧಿಕಾರಿಗಳು ತಿಳಿಸಿದ್ದಾರೆ. |