ಪ್ರತ್ಯೇಕ ತಮಿಳು ರಾಜ್ಯ ಬೇಡಿಕೆಯೊಂದಿಗೆ ಉಗ್ರಗಾಮಿ ಹೋರಾಟ ನಡೆಸುತ್ತಿರುವ ಎಲ್‌ಟಿಟಿಇ ಪ್ರಜಾಸತ್ತಾತ್ಮಕವಾದ ಮುಖ್ಯವಾಹಿನಿಯೊಂದಿಗೆ ಕೈಜೋಡಿಸಲಿ ಎಂದು ಬ್ರಿಟನ್ ಸಲಹೆ ನೀಡಿದೆ.
ಲಿಬರೇಶನ್ ಟೈಗರ್ಸ್ ಆಫ್ ತಮಿಳು ಇಳಂ ಹಾಗೂ ಶ್ರೀಲಂಕಾ ಸೇನೆ ನಡುವೆ ನಡೆಯುತ್ತಿರುವ ಘರ್ಷಣೆಗೆ ಸಂಬಂಧಿಸಿದಂತೆ ಬ್ರಿಟನ್‌ನ ವಿದೇಶಾಂಗ ಖಾತೆಯ ಸಹಾಯಕ ಸಚಿವ ಬಿಲ್ ರಾಮ್ಮೆಲ್ಲ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಎಲ್‌ಟಿಟಿಇ ಬಂಡುಕೋರರು ಶರಣಾಗುವ ಮೂಲಕ ಮುಖ್ಯವಾಹಿನಿಯೊಂದಿಗೆ ಸೇರಿ ತಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ನಿಮ್ಮ ಸಮಸ್ಯೆಗೆ ರಾಜಕೀಯವಾಗಿಯೇ ಪರಿಹಾರ ಕಂಡುಕೊಳ್ಳಬೇಕು ಆ ನಿಟ್ಟಿನಲ್ಲಿ ಈ ಘರ್ಷಣೆಯನ್ನು ತಕ್ಷಣವೇ ನಿಲ್ಲಿಸಿ ಎಂದು ಶುಕ್ರವಾರ ಘರ್ಷಣೆಯ ಕುರಿತು ಸಂಸತ್‌ನಲ್ಲಿ ಮಾತನಾಡುತ್ತ ಅಭಿಪ್ರಾಯ ವ್ಯಕ್ತಪಡಿಸಿದರು.
ಎಲ್‌ಟಿಟಿಇ ಭಯೋತ್ಪಾದನೆಯ ಹಾದಿಯನ್ನು ತ್ಯಜಿಸಬೇಕೆಂದು ನಾವು ಆಗ್ರಹಿಸುತ್ತೇವೆ. ಅಲ್ಲದೇ ಪ್ರಜಾಸತ್ತಾತ್ಮಕವಾಗಿ ರಾಜಕೀಯವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎಂದು ಸಲಹೆ ನೀಡಿದ್ದಾರೆ. |