ಸ್ಥಳೀಯ ಚುನಾವಣೆಯಲ್ಲಿ ಮೂಗು ತೂರಿಸಿದ ಆರೋಪದ ಮೇಲೆ ಬಾಂಗ್ಲಾ ಶೇಕ್ ಹಸೀನಾ ನೇತೃತ್ವ ಸರ್ಕಾರದ ಹಿರಿಯ ಸಚಿವರೊಬ್ಬರ ಮೇಲೆ ಬಾಂಗ್ಲಾ ಚುನಾವಣಾ ಆಯೋಗ ದೂರು ದಾಖಲಿಸಿದೆ.
ಕಳೆದ ತಿಂಗಳು ನಡೆದ ಸ್ಥಳೀಯ ಚುನಾವಣೆಯಲ್ಲಿ ಮೀನುಗಾರಿಕೆ ಸಚಿವ ಅಬ್ದುಲ್ ಲತೀಫ್ ಬಿಸ್ವಾಸ್ ಹಸ್ತಕ್ಷೇಪ ಮಾಡಿದ ಆರೋಪದ ಮೇಲೆ ಗುರುವಾರ ದೂರು ದಾಖಲಿಸಿರುವುದಾಗಿ ಚುನಾವಣಾ ಆಯೋಗ ವಕ್ತಾರ ತಿಳಿಸಿದ್ದಾರೆ.
ಅಲ್ಲದೇ ಈ ಪ್ರಕರಣದಲ್ಲಿ ಸಚಿವ ಬಿಸ್ವಾಸ್ ಪುತ್ರಿ ಹಾಗೂ ಅವಾಮಿ ಲೀಗ್‌ನ ನಾಲ್ಕು ಮಂದಿ ಕೂಡ ಆರೋಪಿಗಳಾಗಿದ್ದು ಅವರ ಮೇಲೂ ದೂರು ದಾಖಲಿಸಲಾಗಿದೆ. ಅವರೆಲ್ಲ ಚುನಾವಣೆಯಲ್ಲಿ ನಕಲಿ ಮತದಾನ, ಬೆದರಿಸುವ ಕಾರ್ಯದಲ್ಲಿ ತೊಡಗಿದ್ದರು.
ಸಚಿವ ಬಿಸ್ವಾಸ್ ಚುನಾವಣೆಯ ಸಂದರ್ಭದಲ್ಲಿ ಸಿರಾಜ್‌ಗಂಜ್‌ನ ಮತಎಣಿಕೆ ಕೇಂದ್ರದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ, ಬ್ಯಾಲೆಟ್ ಪೇಪರನ್ನು ಕಸಿದುಕೊಂಡು, ಮತಗಟ್ಟೆಯನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದರು. |